ಮಹಿಳೆಯನ್ನು ಬಲಿ ಪಡೆದ ಆನ್ ಲೈನ್ ರಮ್ಮಿ ಆಟ: ರಮ್ಮಿ ವ್ಯಸನಿಗಳೇ ಎಚ್ಚರ!
ಚೆನ್ನೈ: ತಮಿಳುನಾಡಿನಲ್ಲಿ ಆನ್ ಲೈನ್ ರಮ್ಮಿ ಆಟಕ್ಕೆ ವ್ಯಸನಿಯಾಗಿದ್ದ ಮಹಿಳೆಯೊಬ್ಬಳು ಲಕ್ಷಾಂತರ ರೂ. ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಈ ಮಹಿಳೆ ತೊರೈಪಾಕ್ಕಂನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕಳೆದ ಲಾಕ್ ಡೌನ್ ಸಮಯದಲ್ಲಿ ಭವಾನಿ ಆನ್ ಲೈನ್‌ನಲ್ಲಿ ಜೂಜಾಡಲು ಪ್ರಾರಂಭಿಸಿದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೊದಮೊದಲು ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ನಂತರ ಲಾಭದ ಆಸೆಗೆ ಬಿದ್ದು, ಹೆಚ್ಚು ಹಣ ಹೂಡಿಕೆ ಮಾಡಿದ್ದರು. ನಂತರ ಈಕೆ ಹಣ ಕಳೆದುಕೊಳ್ಳಲು ಆರಂಭಿಸಿದಾಗ ಪತಿ ಮತ್ತು ಆಕೆಯ ಪೋಷಕರು ಆಟ ಆಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತು ಕೇಳದ ಭವಾನಿ ಆಟ ಮುಂದುವರಿಸಿದ್ದು, ಮುಂದೊಂದಿ ದಿನ ದೊಡ್ಡ ಮೊತ್ತ ಗಳಿಸುವ ಆಸೆಯಲ್ಲಿ ಹೆಚ್ಚುಹೆಚ್ಚು ಹಣ ಹೂಡುತ್ತಿದ್ದರು ಎನ್ನಲಾಗಿದೆ.
ಭವಾನಿ 6 ವರ್ಷಗಳ ಹಿಂದೆ ಭಕ್ಕಿಯರಾಜ್ ಎಂಬುವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲವು ತಿಂಗಳ ಹಿಂದೆ ಭವಾನಿ ತನ್ನ ಚಿನ್ನಾಭರಣವನ್ನು ಅಡವಿಟ್ಟು, ಆ ಹಣವನ್ನೂ ಕಳೆದುಕೊಂಡಿದ್ದಳು. ಈ ವಿಷಯ ತಿಳಿದ ಪತಿ ಆಕೆಗೆ ಎಚ್ಚರಿಕೆ ಕೊಟ್ಟಾಗ ತನ್ನ ತಂಗಿ ಭಾರತಿ ಬಳಿ 1.5 ಲಕ್ಷ ರೂ. ಹಾಗೂ ಅಕ್ಕ ಕವಿತಾ ಬಳಿ 1.5 ಲಕ್ಷ ರೂ. ಸಾಲ ಪಡೆದಿದ್ದಾಳೆ. ಮತ್ತೆ ಆಕೆ ಆ ಹಣವನ್ನೂ ಆನ್ ಲೈನ್ ರಮ್ಮಿಯಲ್ಲಿ ಹೂಡಿಕೆ ಮಾಡಿ ಕಳೆದುಕೊಂಡಿದ್ದಾಳೆ
ಇದರಿಂದ ಹತಾಶೆಗೊಂಡಿದ್ದ ಭವಾನಿ ಇನ್ಮುಂದೆ ರಮ್ಮಿ ಆಡುವುದಿಲ್ಲವೆಂದು ತನ್ನ ಸಹೋದರಿಯರಿಗೆ ಭರವಸೆ ನೀಡಿದ್ದಳು. ಭಾನುವಾರ ರಾತ್ರಿ 8:30ರ ಸುಮಾರಿಗೆ ಮನೆಯವರಿಗೆ ಊಟ ಸಿದ್ಧಪಡಿಸಿದ ಭವಾನಿ ಸ್ನಾನಕ್ಕೆ ಹೋಗಿ ಬರುವುದಾಗಿ ಹೇಳಿ ಕೊಠಡಿಯೊಳಗೆ ಹೋಗಿ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಳು. ಎಷ್ಟೊತ್ತಾದರೂ ಹೊರಗೆ ಭವಾನಿ ಬರಲಿಲ್ಲ. ಮನೆಯವರು ಬಾಗಿಲು ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯದ ಎಲ್ಲಾ ಆರೆಸ್ಸೆಸ್ ಕಚೇರಿಗಳಿಗೆ ಪೊಲೀಸ್ ರಕ್ಷಣೆ: ಆರಗ ಜ್ಞಾನೇಂದ್ರ
ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್
ಭಾರತಕ್ಕೆ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ!
ಇಬ್ಬರು ಮಹಿಳೆಯರ ಹೊಟ್ಟೆಯಿಂದ ಕೆಳ ಭಾಗ ಕತ್ತರಿಸಿದ ಮೃತದೇಹ ಪತ್ತೆ: ಬೆಚ್ಚಿಬಿದ್ದ ಜನ