ಮೀನು ತಿಂದ ಬಳಿಕ ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡ ಮಹಿಳೆ

fish
18/09/2023

ಕ್ಯಾಲಿಫೋರ್ನಿಯಾ: ಮೀನು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ, ಆದರೆ ಇಲ್ಲೊಬ್ಬರು ಮಹಿಳೆ ಮೀನು ತಿಂದ ಬಳಿಕ ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಲಾರಾ ಬರಾಜಾಸ್(40) ಅಂಗಾಂಗಗಳ ನಷ್ಟಪಟ್ಟ ಮಹಿಳೆಯಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಬೋಸ್ ನ ಸ್ಥಳೀಯ ಮಾರು ಕಟ್ಟೆಯಲ್ಲಿ ಲಾರಾ ಅವರು ತಿಲಾಪಿಯಾ ಎಂಬ ಮೀನನ್ನು ಖರೀದಿಸಿದ್ದರು. ಈ ಮೀನಿನ ಸೇವನೆಯ ಬಳಿಕ ಲಾರಾ ಅಸ್ವಸ್ಥರಾಗಿದ್ದರು. ಈ ಮೀನಿನಲ್ಲಿದ್ದ ವಿಬ್ರಿಯೊ ವಲ್ನಿಫಿಕಸ್ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾ ಲಾರಾ ಅವರ ದೇಹವನ್ನು ಪ್ರವೇಶಿಸಿದ್ದು, ಅವರ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಸದ್ಯ ಲಾರಾ ಅವರು ಕೋಮಾ ಸ್ಥಿತಿಯಲ್ಲಿದ್ದು ಅವರ ದೇಹ ಕಪ್ಪು ಬಣ್ಣಕ್ಕೆ ತಿರುಗಿದೆ. ಅವರ ಮೂತ್ರ ಪಿಂಡ ಕೂಡ ವೈಫಲ್ಯವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರನ್ನು ಉಳಿಸಿಕೊಳ್ಳಲು ವೈದ್ಯರು ನಿರಂತರವಾಗಿ ಪರಿಶ್ರಮ ಪಡುತ್ತಿದ್ದಾರೆ.

ಯಾವುದೇ ಮಾಂಸಾಹಾರ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಯಿಸಿದ ನಂತರವೇ ಉಪಯೋಗಿಸಬೇಕು. ಮುಖ್ಯವಾಗಿ ಫ್ರೀಝರ್, ಐಸ್ ಗಳಲ್ಲಿ ಸಂರಕ್ಷಿಸಿಡುವ ಮಾಂಸಾಹಾರಗಳನ್ನು ಹೆಚ್ಚು ಬೇಯಿಸಿಯೇ ಉಪಯೋಗಿಸಬೇಕು. ಕಡಿಮೆ ಪ್ರಮಾಣದಲ್ಲಿ ಬೇಯಿಸುವುದರಿಂದಾಗಿ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯದೇ ಆಹಾರ ಸೇವಿಸುವ ವ್ಯಕ್ತಿಯ ದೇಹಕ್ಕೆ ಪ್ರವೇಶಿಸಿ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು.

ಇತ್ತೀಚಿನ ಸುದ್ದಿ

Exit mobile version