ಮಹಿಳಾ ಡ್ರಗ್ ಪೆಡ್ಲರ್ಗಳ ಬಂಧನ: ಗುಡ್ಡಗಾಡು ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದ ಮಹಿಳೆಯರು!
![drug peddler](https://www.mahanayaka.in/wp-content/uploads/2023/06/drug-peddler.jpg)
ಬೆಂಗಳೂರು : ಪುಲಕೇಶಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮೂವರು ಮಹಿಳಾ ಡ್ರಗ್ ಪೆಡ್ಲರ್ಗಳ ಬಂಧನವಾಗಿದೆ. ಬಂಧಿತರನ್ನು ಪ್ರೇಮಾ, ಸುನೀತಾ ಹಾಗೂ ಮುತ್ಯಾಲಮ್ಮ ಎಂದು ಗುರುತಿಸಲಾಗಿದೆ. ಜಾರ್ಖಂಡ್ನಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಜಾರ್ಖಂಡ್ ನ ಗುಡ್ಡಗಾಡು ಪ್ರದೇಶದಲ್ಲಿ ಗಾಂಜಾ ಬೆಳೆಯುವ ಆರೋಪಿಗಳು ಜಾರ್ಖಂಡ್ನಿಂದ ಬೆಂಗಳೂರಿಗೆ ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಆರೋಪಿ ಮುತ್ಯಾಲಮ್ಮ ಸಹಾಯದಿಂದ ಗಾಂಜಾ ಮಾರಾಟ ಮಾಡಲಾಗುತ್ತಿತ್ತು. ಮುತ್ಯಾಲಮ್ಮಳ ಮನೆಯನ್ನು ಬಾಡಿಗೆಗೆ ಪಡೆದಿದ್ದ ಪ್ರೇಮಾ, ಸುನೀತಾ ಗಾಂಜಾ ಮಾರಾಟದಲ್ಲಿ ಮುತ್ಯಾಲಮ್ಮಳಿಗೆ ಪಾಲು ನೀಡುತ್ತಿದ್ದರು ಎನ್ನಲಾಗಿದೆ.
ಬಾಡಿಗೆ ಮನೆಯಲ್ಲಿ ಉಚಿತವಾಗಿ ವಾಸಿಸುತ್ತಿದ್ದ ಪ್ರೇಮಾ , ಸುನೀತಾ ಗಾಂಜಾ ಮಾರಾಟದ ಹಣವನ್ನು ಮೂರು ಪಾಲು ಮಾಡಿ ಹಂಚಿಕೊಳ್ತಿದ್ದರು. ಆರೋಪಿ ಮುತ್ಯಾಲಮ್ಮ ಗಿರಾಕಿಗಳನ್ನು ಹುಡುಕುವ ಕೆಲಸವನ್ನೂ ಮಾಡುತ್ತಿದ್ದಳು ಎನ್ನಲಾಗಿದೆ.
ಒಂದು ಸಣ್ಣ ಪ್ಯಾಕೆಟ್ 500 ರೂಪಾಯಿ ನಿಗದಿ ಮಾಡಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು. ಪುಲಕೇಶಿ ನಗರದ ಸುತ್ತಮತ್ತ ಇರುವ ಖಾಸಗಿ ಕಂಪನಿಗಳ ನೌಕರರು ಇವರಿಂದ ಗಾಂಜಾ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಜಾರ್ಖಂಡ್ನಿಂದ ಪ್ರೇಮಾ, ಸುನೀತಾರನ್ನು ಬಂಧಿಸಿ ತಂದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw