ವುಡ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ಗಳಿಗೆ ಬೆಂಕಿ

ಆಂಧ್ರಪ್ರದೇಶ: ಪ್ರಕಾಶಂ ಜಿಲ್ಲೆಯ ಒಂಗೋಲೆಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಗಳಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಅವು ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ಸಂಭವಿಸಿದೆ.
ಕೋವಿಡ್ನಿಂದಾಗಿ ಬಸ್ಗಳನ್ನು ವುಡ್ ಕಾಂಪ್ಲೆಕ್ಸ್ನಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಕಾವೇರಿ ಟ್ರಾವೆಲ್ಸ್ ಗೆ ಸೇರಿದ್ದ ಬಸ್ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದಿವೆ. ಇದರಿಂದ ಸುಮಾರು 8 ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ.
ಬೆಂಕಿಗಾಹುತಿಯಾಗಿರುವ ಎಲ್ಲ ಬಸ್ಗಳು ಎಸಿಯಿಂದ ಕೂಡಿದ್ದು, ಸ್ಥಳದಲ್ಲಿ ಒಟ್ಟು 20 ಬಸ್ಗಳನ್ನ ನಿಲ್ಲಿಸಲಾಗುತ್ತು ಎಂದು ತಿಳಿದು ಬಂದಿದೆ. ಬಸ್ಗಳಿಗೆ ಬೆಂಕಿ ತಗುಲುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವು
ಕೆಂಪುಕೋಟೆ ಮೇಲೆ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ
ಪ್ರೀತಿಗೆ ಪೋಷಕರ ವಿರೋಧ: ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ
ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ: ವಿದೇಶಿ ಪ್ರಜೆ ಸೆರೆ
ನಾಪತ್ತೆಯಾಗಿದ್ದ ಬಾಲಕನ ಮೃತದೇಹ ನದಿಯಲ್ಲಿ ಪತ್ತೆ