ಮಲೆನಾಡಲ್ಲಿ ಗಾಳಿ–ಮಳೆ ಅಬ್ಬರ: ಮರ ರಸ್ತೆಗುರುಳಿ ಕಳಸ ಟು ಮೂಡಿಗೆರೆ ಮಾರ್ಗ ಬಂದ್!

25/03/2025
ಚಿಕ್ಕಮಗಳೂರು: ಮಲೆನಾಡಲ್ಲಿ ಗಾಳಿ–ಮಳೆ ಅಬ್ಬರ ಮುಂದುವರಿದಿದೆ. ಕಳಸ ಸುತ್ತಮುತ್ತ ಬೆಳ್ಳಂಬೆಳಗ್ಗೆಯೇ ಭಾರೀ ಗಾಳಿ—ಮಳೆಯಾಗಿದೆ.
ಭಾರೀ ಗಾಳಿಗೆ ಬೃಹತ್ ಮರ ಧರೆಗುರುಳಿದಿದೆ. ಪರಿಣಾಮವಾಗಿ ಕಳಸ ಟು ಮೂಡಿಗೆರೆ ಮಾರ್ಗ ತಾತ್ಕಾಲಿಕ ಬಂದ್ ಆಗಿದೆ. ಮರ ಬಿದ್ದ ಹಿನ್ನೆಲೆ ಸ್ಥಳೀಯರು ಮರ ತೆರವು ಕಾರ್ಯ ನಡೆಸುತ್ತಿದ್ದಾರೆ.
ಕಳಸ ತಾಲೂಕಿನ ಹಿರೇಬೈಲ್–ಮರಸಣಿಗೆ ಬಳಿ ಈ ಘಟನೆ ನಡೆದಿದೆ. ಹಿರೇಬೈಲ್, ಮರಸಣಿಗೆ, ಯಡಿಯೂರು ಸುತ್ತಾಮುತ್ತಾ ಭಾರೀ ಗಾಳಿ ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: