ರಂಝಾನ್ ನಲ್ಲಿ ಕೇವಲ 6 ಗಂಟೆ ಮಾತ್ರ ಕೆಲಸ ಮಾಡಿ: ಕತಾರ್ ದೇಶ ಆದೇಶ - Mahanayaka
3:26 PM Saturday 21 - September 2024

ರಂಝಾನ್ ನಲ್ಲಿ ಕೇವಲ 6 ಗಂಟೆ ಮಾತ್ರ ಕೆಲಸ ಮಾಡಿ: ಕತಾರ್ ದೇಶ ಆದೇಶ

13/03/2024

ಉಪವಾಸ ತಿಂಗಳಾದ ರಂಝಾನ್ ನಲ್ಲಿ ಪ್ರತಿದಿನ ಆರು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕತಾರ್ ದೇಶದ ಸರ್ಕಾರ ಆದೇಶಿಸಿದೆ. ವಾರದಲ್ಲಿ 36 ಗಂಟೆಗಿಂತ ಅಧಿಕ ಯಾರೂ ಕೆಲಸ ಮಾಡಬಾರದು ಎಂದು ಕೂಡ ಅದು ಹೇಳಿದೆ.
ಈ ಮೂಲಕ ಉಪವಾಸ ನಿರತ ಶ್ರದ್ದಾಳುಗಳ ಪ್ರಶಂಸೆಗೆ ಪಾತ್ರವಾಗಿದೆ.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಂಝಾನ್ ನಲ್ಲಿ ಉದ್ಯೋಗ ಸಮಯ 5 ಗಂಟೆಯಾಗಿರಲಿದೆ ಎಂದು ಆರಂಭದಲ್ಲಿ ಕತಾರ್ ದೇಶ ಘೋಷಿಸಿತ್ತು. ಆದರೆ ಆ ಬಳಿಕ ಇದನ್ನು ಆರು ಗಂಟೆ ಮೀರಬಾರದು ಎಂದು ತಿದ್ದುಪಡಿ ಮಾಡಿದೆ ಮತ್ತು ವಾರದಲ್ಲಿ 36 ಗಂಟೆಗಳಿಗಿಂತ ಅಧಿಕ ಸಮಯ ಯಾರನ್ನೂ ದುಡಿಸಬಾರದು ಎಂದು ಕೂಡ ಅದು ಹೇಳಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ