ಸೌದಿ ನೆಲದಲ್ಲಿ ಜಗತ್ತಿನ ಅತಿ ದೊಡ್ಡ ‘ಖರ್ಜೂರ ಹಬ್ಬ’: ಅನೇಕ ದೇಶಗಳಿಗೆ ಖರ್ಜೂರ ರವಾನೆ
ಜಗತ್ತಿನಲ್ಲಿಯೇ ಅತಿ ದೊಡ್ಡದೆಂದು ಹೇಳಲಾಗುವ ಖರ್ಜೂರ ಹಬ್ಬ ಸೌದಿ ಅರೇಬಿಯಾದಲ್ಲಿ ಆರಂಭವಾಗಿದೆ. ಸೌದಿ ಅರೇಬಿಯಾದ ಅಲ್ ಖಸೀಮ್ ಪ್ರದೇಶದಲ್ಲಿ ಈ ಹಬ್ಬ ನಡೆಯುತ್ತಿದೆ. ಇಲ್ಲಿಂದ ಟನ್ನುಗಟ್ಟಲೆ ಖರ್ಜೂರವನ್ನು ಜಗತ್ತಿನ ನೂರಕ್ಕಿಂತಲೂ ಅಧಿಕ ರಾಷ್ಟ್ರಗಳಿಗೆ ರವಾನಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಪ್ರತಿದಿನ ಟನ್ ಗಟ್ಟಲೆ ಖರ್ಜೂರದ ಹಣ್ಣುಗಳು ಅಲ್ ಕಸಿಮ್ ನ ಬುರೈದದ ಖರ್ಜೂರ ಹಬ್ಬದ ಸ್ಥಳದಿಂದ ವಿವಿಧ ರಾಷ್ಟ್ರಗಳಿಗೆ ರವಾನೆಯಾಗುತ್ತಿದೆ. ಅದಕ್ಕಾಗಿ ಸಾವಿರಾರು ವಾಹನಗಳನ್ನು ಪ್ರತಿದಿನ ಉಪಯೋಗಿಸಲಾಗುತ್ತಿದೆ. ಗಲ್ಫ್ ರಾಷ್ಟ್ರಗಳು ಅಮೆರಿಕ ಯುರೋಪ್ ಪಶ್ಚಿಮೇಶಿಯ ಮುಂತಾದ ರಾಷ್ಟ್ರಗಳಿಗೆ ಈ ಕರ್ಜೂರದ ಹಣ್ಣುಗಳು ರಫ್ತಾಗುತ್ತಿವೆ ಎಂದು ತಿಳಿದು ಬಂದಿದೆ.
3,90,000 ಟನ್ ಗಿಂತಲೂ ಅಧಿಕ ಖರ್ಜೂರದ ಹಣ್ಣುಗಳನ್ನು ಪ್ರತಿವರ್ಷ ಈ ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ವರ್ಷ ಈ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಅದಕ್ಕಾಗಿ 20 ಲಕ್ಷಕ್ಕಿಂತ ಅಧಿಕ ಖರ್ಜೂರದ ಸಸಿಗಳನ್ನು ನೀಡಲಾಗುತ್ತಿದೆ. ವಿಷನ್ 2030 ಯೋಜನೆಯ ಅನ್ವಯ ಇವೆಲ್ಲ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth