ಇನ್ನಿಲ್ಲ: ಜಗತ್ತಿನ ಅತಿ ಹಿರಿಯ ವ್ಯಕ್ತಿ ನಿಧನ; ಗಣ್ಯರ ಸಂತಾಪ
ಜಗತ್ತಿನ ಅತಿ ಹಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ವೆನೆಜುವೇಲಾದ ಜುವಾನ್ ನ್ ವಿನ್ಸೆಂಟ್ ಪೆರೇಸ್ ನಿಧನರಾಗಿದ್ದಾರೆ. 115 ವರ್ಷಕ್ಕೆ ಇನ್ನೆರಡು ತಿಂಗಳಷ್ಟೇ ಬಾಕಿ ಇತ್ತು.
ಪೆರೇಸು ಹುಟ್ಟಿದ್ದು 1909 ಮೇ 27ರಂದು. 1997ರಲ್ಲಿ ಇವರ ಪತ್ನಿ ನಿಧನರಾದರು.ಇವರಿಗೆ 11 ಮಕ್ಕಳಿದ್ದಾರೆ. ಈ 11 ಮಕ್ಕಳಿಗೆ 41 ಮಕ್ಕಳು ಮತ್ತು ಅವರ ಮಕ್ಕಳಿಗೆ 18 ಮಕ್ಕಳು ಮತ್ತು ಅವರ ಮಕ್ಕಳಿಗೆ 12 ಮಕ್ಕಳಿದ್ದಾರೆ.
ತನ್ನ ದೀರ್ಘ ಆಯುಷ್ಯದ ಗುಟ್ಟನ್ನು ಒಂದು ಸಂದರ್ಭದಲ್ಲಿ ಅವರು ಬಿಟ್ಟು ಕೊಟ್ಟಿದ್ದರು. ಕಠಿಣ ಪರಿಶ್ರಮ ಬೇಗನೆ ನಿದ್ರಿಸುವುದು ರಜಾ ಸಂದರ್ಭದಲ್ಲಿ ಪೂರ್ಣ ವಿಶ್ರಾಂತಿಯನ್ನು ಪಡಕೊಳ್ಳುವುದು ದೇವನೊಂದಿಗಿನ ಅಪಾರ ಭಕ್ತಿಯೇ ತನ್ನ ದೀರ್ಘಾಯುಷ್ಯಕ್ಕೆ ಕಾರಣ ಎಂದು ಹೇಳಿದ್ದರು.
2020 ರಲ್ಲಿ ಅವರು ಕೊರೊನಾಗೆ ತುತ್ತಾದರೂ ಯಾವುದೇ ಅಪಾಯವಿಲ್ಲದೇ ಪಾರಾದರು. ಐದನೇ ವರ್ಷದಲ್ಲಿ ಇವರು ತನ್ನ ತಂದೆಯ ಜೊತೆಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು ಕಬ್ಬು ಮತ್ತು ಕಾಫಿ ಬೆಳೆ ಇವರದಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth