ನಿಮ್ಮ ಮುಖ ಸುಕ್ಕುಕಟ್ಟಿದೆಯೇ? | ಮುಜುಗರ ಉಂಟಾಗುತ್ತಿದ್ದೆಯೇ? | ಇಲ್ಲಿದೆ ಸರಳ ಪರಿಹಾರ

02/11/2020

ಮುಖದಲ್ಲಿ ಸುಕ್ಕುಗಟ್ಟಿದಂತಾಗಿ ಗೆರೆಗಳು ಕಂಡು ಬಂದರೆ, ವಯಸ್ಸು ಹೆಚ್ಚು ಕಾಣುತ್ತದೆ. ಹಾಗೆಯೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಮುಖ ಹೀಗೆ ಸುಕ್ಕುಕಟ್ಟಿತೇ? ಎಂದು ಪ್ರಶ್ನಿಸಿ ಮುಜುಗರಕ್ಕೀಡಾಗಿಸುವುದಂತೂ ಇದ್ದೇ ಇದೆ. ಹಾಗಿದ್ದರೆ, ಈ ಸುಕ್ಕುಗಳನ್ನು ನಿವಾರಿಸುವುದು ಹೇಗೆ?


ಸಾಮಾನ್ಯವಾಗಿ ಮಹಿಳೆಯರು, ಪುರುಷರು ತಮ್ಮ ಮುಖದ ಸೌಂದರ್ಯಕ್ಕೆ ಹೆಚ್ಚಾಗಿ ಮಹತ್ವ ನೀಡುತ್ತಾರೆ. ಮುಖದಲ್ಲಿ ಗೆರೆಗಳು ಕಂಡರೆ, ಇಲ್ಲದ ಕ್ರೀಮ್ ಗಳನ್ನು ಹಚ್ಚಿ, ಇದ್ದ ಸೌಂದರ್ಯವನ್ನೂ ಕಳೆದುಕೊಳ್ಳುತ್ತಾರೆ. ಅಂತಹದ್ದರಲ್ಲಿ ಮುಖದ ಮೇಲೆ ಸುಕ್ಕು ಕಂಡರೆ, ಸುಮ್ಮನಿರುತ್ತಾರೆಯೇ, ಇಲ್ಲವೇ ಇಲ್ಲ. ಸಿಕ್ಕ ಕಡೆಯೆಲ್ಲ ಮದ್ದಿಗಾಗಿ ಅಲೆದಾಡುತ್ತಾರೆ. ನಿಜ. ಆದರೆ ಈ ಸಮಸ್ಯೆಗೆ ಸರಳ ಪರಿಹಾರ ಇಲ್ಲಿದೆ.


ಶ್ರೀಗಂಧದ ಎಣ್ಣೆಯನ್ನು ಮುಖಕ್ಕೆ ಹಚ್ಚುವ ಮೂಲಕ ಸುಕ್ಕುಗಳಿಂದ ನೀವು ಮುಕ್ತರಾಗಬಹುದಾಗಿದೆ. ಶ್ರೀಗಂಧದ ಎಣ್ಣೆಯು ನಮ್ಮ ಚರ್ಮದಲ್ಲಿನ ತೇವಾಂಶವನ್ನು ಹಾಗೆಯೇ ಉಳಿಸುತ್ತದೆ. ಹಾಗಾಗಿ ನಿಮ್ಮ ಮುಖದಲ್ಲಿನ ಚರ್ಮ ಕೋಶಗಳು ಸಕ್ರಿಯವಾಗಿರುತ್ತದೆ. ಹೀಗಾಗಿ ಶ್ರೀಗಂಧದ ಎಣ್ಣೆಯನ್ನು ಮುಖಕ್ಕೆ ಮಸಾಜ್ ಮಾಡುವ ಮೂಲಕ ನಿಮ್ಮ ಮುಖದ ಕಾಂತಿ ಹಾಗೂ ಸುಕ್ಕುಗಳಿಂದ ಮುಕ್ತರಾಗಬಹುದಾಗಿದೆ.






 

ಇತ್ತೀಚಿನ ಸುದ್ದಿ

Exit mobile version