ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು! - Mahanayaka
11:36 AM Wednesday 5 - February 2025

ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು!

yadagiri
16/09/2021

ಯಾದಗಿರಿ: ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ ಅತ್ಯಾಚಾರ ಕೂಡ ನಡೆದಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಅಪಹರಿಸಿದ್ದ ನಾಲ್ವರು ಹೊಲಕ್ಕೆ ಎಳೆದೊಯ್ದಿದ್ದಾರೆ. ಬಳಿಕ ನಗ್ನಗೊಳಿಸಿ ಹಲ್ಲೆ ಮಾಡಿದ್ದಾರೆ. ಅದನ್ನು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ತಂಡದಲ್ಲಿದ್ದ ಇಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಯಾದಗಿರಿ, ಶಹಾಪುರ ಹೆದ್ದಾರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪ ಕೇಳಿ ಬಂದಿತ್ತು. ಘಟನೆ ಸಂಬಂಧಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಯ ವೇಳೆ ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಯಾದಗಿರಿ ಎಸ್ ಪಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ನಿಂಗರಾಜ್, ಭೀಮಾಶಂಕರ್, ಅಯ್ಯಪ್, ಶರಣ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಪ್ರಮುಖ ಆರೋಪಿ ಶಹಾಪುರ ಪೊಲೀಸ್ ಠಾಣೆಯ ಪಿಎಸ್ ಐ ಅವರ ವಾಹನದ ಚಾಲಕನಾಗಿದ್ದ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬಿಗ್ ಬ್ರೇಕಿಂಗ್ ನ್ಯೂಸ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ

ಮಕ್ಕಳಿಗೆ ಎರಡು ದಿನಗಳಿಗಿಂತ ಹೆಚ್ಚುಕಾಲ ಕೊವಿಡ್ ಲಕ್ಷಣಗಳಿದ್ದರೆ ತಪ್ಪದೇ ಪರೀಕ್ಷೆ ನಡೆಸಿ

4.3 ಕೋಟಿ ವರ್ಷಗಳ ಹಿಂದಿನ ನಾಲ್ಕು ಕಾಲಿನ ಬೃಹತ್ ತಿಮಿಂಗಲ ಪತ್ತೆ!

ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!

ಮಹಿಳೆ ಮೃತಪಟ್ಟು ನಾಲ್ಕು ತಿಂಗಳ ಬಳಿಕ ಕೊರೊನಾ ಲಸಿಕೆ ನೀಡಿದ ಆರೋಗ್ಯ ಕೇಂದ್ರ!

ದೇವಸ್ಥಾನ ತೆರವು ವಿಚಾರ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!

ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ | ನಾಲ್ವರು ಆರೋಪಿಗಳು ಅರೆಸ್ಟ್

ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು

ಇತ್ತೀಚಿನ ಸುದ್ದಿ