ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ - Mahanayaka
10:43 PM Wednesday 12 - March 2025

ಯಡಿಯೂರಪ್ಪನವರನ್ನು ಕಿತ್ತು ಹಾಕಿದರು ಎಂದ ಸಿದ್ದರಾಮಯ್ಯ: ಎದ್ದು ನಿಂತು ಮಾತನಾಡಿದ ಬಿಎಸ್ ವೈ

yadiurappa
12/03/2022

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಾ, ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದರು ಎಂದು ಪ್ರಸ್ತಾಪಿಸಿದ್ದು, ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಎದ್ದು ನಿಂತು ಮಾತನಾಡಿದ ಪ್ರಸಂಗ ಶುಕ್ರವಾರ ಸದನದಲ್ಲಿ ನಡೆಯಿತು.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದರು ಎಂದು ಸಿದ್ದರಾಮಯ್ಯನವರು ಹೇಳಿದ್ದು, ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಳೆ ಎದ್ದು ನಿಂತು ಮಾತನಾಡಿದ ಅವರು, ನನ್ನನ್ನು ಯಾರು ಕೂಡ ಕಿತ್ತು ಹಾಕಿಲ್ಲ, ನಾನಾಗಿಯೇ ಪದ ತ್ಯಾಗ ಮಾಡಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದು ಎಂದು ಅವರು ತಿರುಗೇಟು ನೀಡಿದರು.

ಬೊಮ್ಮಾಯಿ ಮಂಡಿಸಿದ ಬಜೆಟ್ ಅದ್ಭುತವಾಗಿದೆ, ಅದನ್ನು ಹಿಡಿದೇ ನಾವು ರಾಜ್ಯದಾದ್ಯಂತ ಸುತ್ತಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ನಿಮಗೆ ವಿರೋಧ ಪಕ್ಷವಾಗಿರುವುದೇ ಶಾಶ್ವತ ಎಂದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, ಕಾಂಗ್ರೆಸ್ ಧೂಳೀಪಟವಾಗಿರೋದು ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ಈಗ ಯಾರೂ ನಾಯಕರೇ ಇಲ್ಲ. ನಿಮ್ಮ ಸ್ಥಿತಿ ನೋಡುತ್ತಿದ್ದರೆ ಅಯ್ಯೋ ಅನಿಸುತ್ತದೆ ಎಂದು ಯಡಿಯೂರಪ್ಪ ಕುಟುಕಿದರು.


Provided by

ಮುಂದಿನ ಚುನಾವಣೆಯಲ್ಲೂ ನಾವೇ 135-140 ಸ್ಥಾನಗಳನ್ನು ಗೆದ್ದು ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮಗೆ ವಿರೋಧ ಪಕ್ಷವೇ ಗತಿ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ನಾಮಗೊಳ್ಳಲಿದೆ ಎಂದು ಯಡಿಯೂರಪ್ಪ ಯಡಿಯೂರಪ್ಪ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೌದ್ಧ ಧರ್ಮದ ಅವಹೇಳನ ಆರೋಪ: ಸಚಿವ ಸುಧಾಕರ್ ವಿರುದ್ಧ ಪ್ರತಿಭಟನೆ

ಬಿಜೆಪಿಗೆ ಹೇಗೆ ಮತ ಗಳಿಸಬೇಕು ಎಂದು ಗೊತ್ತಿದೆ: ರಾಕೇಶ್ ಟೀಕಾಯತ್ ಹೇಳಿಕೆ

ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು !

ಕಾಂಗ್ರೆಸ್ ಅವನತಿ ಆರಂಭ: ಸಂಸದ ಪ್ರತಾಪ್ ಸಿಂಹ

ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!

 

ಇತ್ತೀಚಿನ ಸುದ್ದಿ