ಯಡಿಯೂರಪ್ಪನವರೇ ವಯಸ್ಸು ಆಗೋಯ್ತಲ್ಲ ನಮ್ಗೆ: ಸಿದ್ದರಾಮಯ್ಯ, ಯಡಿಯೂರಪ್ಪ ಆತ್ಮೀಯತೆ!
ಬೆಂಗಳೂರು: ವಿಧಾನಸಭಾ ಕಲಾಪಕ್ಕೆ ತೆರಳುತ್ತಿದ್ದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಮುಖಾಮುಖಿಯಾದರು.
ಈ ವೇಳೆ ಇಬ್ಬರು ಹಿರಿಯ ನಾಯಕರೂ ಕೆಲ ಕಾಲ ಪರಸ್ಪರ ಆತ್ಮೀಯವಾಗಿ ಮಾತನಾಡಿದ್ದಾರೆ. ರಾಜಕೀಯದ ಜಂಜಾಟ ಮರೆತು ಮನತುಂಬಿ ನಕ್ಕರು.
ಸಿದ್ದರಾಮಯ್ಯನವರನ್ನು ಕಂಡು ಯಡಿಯೂರಪ್ಪನವರು, “ಏನು ನೀವು ಕೌನ್ಸಿಲ್ ಗೆ ಹೋಗ್ತಾ ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ, ಯಡಿಯೂರಪ್ಪ ಆತ್ಮೀಯ ಕ್ಷಣ
ಯಡಿಯೂರಪ್ಪನವರ ಪ್ರಶ್ನೆಗೆ ನಕ್ಕ ಸಿದ್ದರಾಮಯ್ಯ, ಯಡಿಯೂರಪ್ಪನವರೇ ವಯಸ್ಸು ಆಗೋಯ್ತಲ್ಲ ನಮ್ಗೆ. ನೀವೂ ಕೌನ್ಸಿಲ್ ಗೆ ಹೋಗಲು ಆಗಲ್ಲ, ನಾನೂ ಹೋಗಲು ಆಗಲ್ಲ ಎಂದು ಹೇಳಿದರು.
ಇದೇ ವೇಳೆ ಇಬ್ಬರು ನಾಯಕರೂ ಮನತುಂಬಿ ನಕ್ಕಿದ್ದಾರೆ. ಈ ವೇಳೆ ಸುತ್ತಮುತ್ತಲಿದ್ದವರು ಆಸಕ್ತಿಯಿಂದ ಇವರ ಮಾತುಕತೆ ನೋಡುತ್ತಿರುವುದು ಕಂಡು ಬಂತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka