ಯಕ್ಷಗಾನದಲ್ಲಿ ಜಾತಿ, ಧರ್ಮ, ಹಿಂದುತ್ವ ತೂರಿಸಲು ಹೊರಟಿದ್ದಾರಲ್ವ ಮಾನ ಮರ್ಯಾದೆ ಇದೆಯಾ?: ಸಿದ್ದರಾಮಯ್ಯ ಪ್ರಶ್ನೆ - Mahanayaka
4:41 PM Saturday 14 - December 2024

ಯಕ್ಷಗಾನದಲ್ಲಿ ಜಾತಿ, ಧರ್ಮ, ಹಿಂದುತ್ವ ತೂರಿಸಲು ಹೊರಟಿದ್ದಾರಲ್ವ ಮಾನ ಮರ್ಯಾದೆ ಇದೆಯಾ?: ಸಿದ್ದರಾಮಯ್ಯ ಪ್ರಶ್ನೆ

siddaramaiha
06/01/2023

ಮಂಗಳೂರು: ನಳಿನ್ ಕುಮಾರ್ ಕಟೀಲ್ ಯಕ್ಷಗಾನದಲ್ಲಿ ಬಿಜೆಪಿ ವಿಚಾರಗಳನ್ನು ಬಿಂಬಿಸಬೇಕು ಎಂದು ಹೇಳಿದ್ದಾರಂತೆ, ಯಕ್ಷಗಾನ ಇಲ್ಲಿನ ಜನ ಆರಾಧಿಸುವ ಕಲೆ. ಇಂಥಾ ಕಲೆಯಲ್ಲಿ ಜಾತಿ, ಧರ್ಮ, ಹಿಂದುತ್ವ ತೂರಿಸಲು ಹೊರಟಿದ್ದಾರಲ್ವ ಮಾನ ಮರ್ಯಾದೆ ಇದೆಯಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಹರೇಕಳದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿ, ಇಂದು ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಪ್ರಯೋಗಶಾಲೆಯಾಗಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಯಕ್ಷಗಾನದಲ್ಲಿ ಬಿಜೆಪಿ ವಿಚಾರಗಳನ್ನು ಬಿಂಬಿಸಬೇಕು ಎಂದು ಹೇಳಿದ್ದಾರಂತೆ. ಯಕ್ಷಗಾನ ಇಲ್ಲಿನ ಜನ ಆರಾಧಿಸುವ ಕಲೆ. ಇಂಥಾ ಕಲೆಯಲ್ಲಿ ಜಾತಿ, ಧರ್ಮ, ಹಿಂದುತ್ವ ತೂರಿಸಲು ಹೋರಾಟಿದ್ದಾರಲ್ವ ಮಾನ ಮರ್ಯಾದೆ ಇದೆಯಾ? ಸಂವಿಧಾನದ ಬಗ್ಗೆ ಗೌರವ ಇಲ್ಲದವರು ದೇಶ ಆಳಲು ಲಾಯಕ್ಕಾ? ಎಂದು ಪ್ರಶ್ನಿಸಿದರು.

ಅಧಿಕಾರಕ್ಕೆ ಬರುವ ಮೊದಲು ಮೋದಿ ಅವರು ಅಚ್ಚೇದಿನ್‌ ಆಯೇಗಾ ಅಂದಿದ್ದರು, ಈಗ ಒಮ್ಮೆಯಾದರೂ ನಿರುದ್ಯೋಗದ ಬಗ್ಗೆ ತಮ್ಮ ಮನ್‌ ಕಿ ಬಾತ್‌ ನಲ್ಲಿ ಮಾತನಾಡಿದ್ದಾರ? ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು, 8 ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು, ಆಗಿದೆಯಾ? ಹೊರದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. 15 ಪೈಸೆ ಆದರೂ ಹಾಕಿದ್ದಾರ?  ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

2016ರಲ್ಲಿ ನರೇಂದ್ರ ಮೋದಿ ಅವರು 2022ನೇ ಇಸವಿಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಈ ಭಾಗದಲ್ಲಿ ಅಡಿಕೆ ಬೆಳೆಯುವ ರೈತರ ಆದಾಯ ದುಪ್ಪಟ್ಟಾಗಿದೆಯಾ? ಅಡಿಕೆಗೆ ಹಳದಿ ರೋಗ, ಎಲೆ ಚುಕ್ಕಿ ರೋಗ ಬಂದು ಬೆಳೆ ನಾಶವಾಗಿದೆ, ಇನ್ನೊಂದು ಕಡೆ ಭೂತಾನ್‌ ನಿಂದ 17,000 ಮೆಟ್ರಿಕ್‌ ಟನ್‌ ಅಡಿಕೆಯಿಂದ ಆಮದು ಮಾಡಿಕೊಂಡಿದ್ದಾರೆ ಇದರ ಜೊತೆ ಕಳ್ಳ ಮಾರ್ಗದ ಮೂಲಕ ದೇಶದೊಳಗೆ ಅಡಿಕೆ ಬಂದಿದೆ. ಹೀಗಾದರೆ ಅಡಿಕೆ ಬೆಳೆಗಾರರ ಆದಾಯ ದುಪ್ಪಟ್ಟಾಗುತ್ತ? ಇದರ ಬದಲು ರೈತರು ಕೃಷಿ ಕಾರ್ಯಗಳಿಗೆ ಖರ್ಚು ಮಾಡುವ ಬಂಡವಾಳ ದುಪ್ಪಟ್ಟಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮನಮೋಹನ್‌ ಸಿಂಗ್‌ ಅವರು ಇರುವಾಗ 419 ರೂ ಇದ್ದ ಗ್ಯಾಸ್‌ ಬೆಲೆ 1,150 ರೂ ಆಗಿದೆ. ಮಿಸ್ಟರ್‌ ನರೇಂದ್ರ ಮೋದಿಜಿ ಕಹಾ ಹೈ ಅಚ್ಚೇದಿನ್? ನ ಖಾವೂಂಗ ನ ಖಾನೇದೂಂಗ ಎಂದು ಮೋದಿ ಅವರು ಹೇಳಿದ್ದರು, ಇಲ್ಲಿನ ಬಿಜೆಪಿ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರು ಹೇಳಿದ್ದಾರೆ. ವಿಧಾನಸೌಧದ ಗೋಡೆಗಳು ಲಂಚ, ಲಂಚ ಎಂದು ಪಿಸುಗುಟ್ಟಲು ಶುರು ಮಾಡಿವೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 6-7-2021ರಲ್ಲಿ ಪತ್ರದ ಮೂಲಕ ಹೇಳಿದ್ದಾರೆ, ಒಂದು ವರ್ಷ 5 ತಿಂಗಳು ಆಗಿದೆ ಒಂದು ತನಿಖೆ ಮಾಡಿಸಿಲ್ಲ ಪುಣ್ಯಾತ್ಮ. ನ ಖಾವೂಂಗ ನ ಖಾನೆದೂಂಗ ಎನ್ನುವುದರಲ್ಲಿ ನಂಬಿಕೆ ಇದ್ದಿದ್ದರೆ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ವಜಾ ಮಾಡಬೇಕಿತ್ತು ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ