ಚಲವಾದಿ ಸಮಾಜದ ಹಿರಿಯಜ್ಜಿ, ಶತಾಯುಷಿ ಯಲ್ಲವ್ವ ರೇವಣಪ್ಪ ಅಜಮನಿ ನಿಧನ - Mahanayaka
2:55 PM Thursday 12 - December 2024

ಚಲವಾದಿ ಸಮಾಜದ ಹಿರಿಯಜ್ಜಿ, ಶತಾಯುಷಿ ಯಲ್ಲವ್ವ ರೇವಣಪ್ಪ ಅಜಮನಿ ನಿಧನ

yallavva revanappa ajamani
04/06/2021

ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿದ್ದ ಶತಾಯುಷಿ (110 ) ಯಲ್ಲವ್ವ.ರೇವಣಪ್ಪ.ಅಜಮನಿ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.

ಮೃತರು ಚಲವಾದಿ ಸಮಾಜದ ಹಿರಿಯಜ್ಜಿಯಾಗಿದ್ದು ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಗಿರಿಮೊಮ್ಮಕ್ಕಳನ್ನು ಕಂಡಿದ್ದರು.

ಮೃತ ಅಜ್ಜಿಗೆ ನಾಲ್ಕು ಜನ ಹೆಣ್ಣುಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಮುದ್ದೇಬಿಹಾಳದ ನಾಲತವಾಡ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ  ಶುಕ್ರವಾರ ಮದ್ಯಾಹ್ನ 3 ಗಂಟೆಗೆ ನೆರವೇರಿಸಲಾಗುವದೆಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸೂಚನೆ :

ಹಿರಿಯ ಅಜ್ಜಿಗೆ ಚಲವಾದಿ ಸಮಾಜದ ಮುಖಂಡ ಹಾಗೂ ಪತ್ರಕರ್ತ ಸಿದ್ದು ಚಲವಾದಿ, ಸಾಹಿತಿ ಶಿವಪುತ್ರ ಅಜಮನಿ, ನಿವೃತ್ತ ಬಿಎಸ್ಎಫ್ ಯೋಧ ರೇವಣಪ್ಪ ಅಜಮನಿ, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಯಮನಪ್ಪ ಹಂಗರಗಿ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ