ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್ - Mahanayaka
6:42 AM Wednesday 5 - February 2025

ಇಂದಿರಾ ಇಲ್ಲದಿರುತ್ತಿದ್ದರೆ, ಸಿ.ಟಿ.ರವಿ ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಸೆಗಣಿ ಬಾಚುತ್ತಿರುತ್ತಿದ್ದರು | ಕಾಂಗ್ರೆಸ್

c t ravi
08/08/2021

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಎಂದು ನಿನ್ನೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟ್ವೀಟ್ ಮಾಡುವ ಮೂಲಕ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದ್ದರು. ಇದೀಗ ಸಿ.ಟಿ.ರವಿ ಹೇಳಿಕೆಗೆ ಕಾಂಗ್ರೆಸ್(@INCKarnataka) ಖಾರವಾಗಿ ಪ್ರತಿಕ್ರಿಯಿಸಿದೆ.

ಇಂದಿರಾ ಗಾಂಧಿಯವರ ಮೇಲಿನ ದ್ವೇಷಕ್ಕೆ ಆಕ್ಸಿಡೆಂಟ್ ಮಾಡಿ ಇಬ್ಬರು ಅಮಾಯಕರನ್ನು ಕೊಂದ ‘ಚೆಂಡು ಹೂ’ ರವಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕಂತೆ!, ಅದೇ ದ್ವೇಷದಲ್ಲಿ ಇಂದಿರಾ ಗಾಂಧಿಯವರ ಮಹತ್ತರವಾದ ಉಳುವವನೇ ಹೊಲದೊಡೆಯ ಕಾರ್ಯಕ್ರಮವನ್ನು ಕೂಡ ರದ್ದು ಗೊಳಿಸುವಿರಾ?, ಬಾಂಗ್ಲಾದೇಶವನ್ನು ಪಾಕ್ ನೊಂದಿಗೆ ಸೇರಿಸುವಿರಾ? ಎಂದು ಇಂದಿರಾ ಗಾಂಧಿ ಸಾಧನೆಗಳನ್ನು ಹೇಳುವ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

ರಾಜ್ಯದ್ರೋಹಿ ಸಿ.ಟಿ.ರವಿ ಕಳೆದ 2 ವರ್ಷದಲ್ಲಿ ನಿಮ್ಮ ಸರ್ಕಾರದ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಿ. ಇಂದಿರಾ ಕ್ಯಾಂಟೀನ್ ಗೆ ಅನುದಾನ ಕೊಡಲಾಗದ, ಒಂದೂ ಜನಪರ ಯೋಜನೆಯನ್ನು ಜಾರಿಗೊಳಿಸಲಾಗದ ಸಿ.ಟಿ.ರವಿಯ ಮಾತು ಕೈಲಾಗದವನು ಮೈಪರಚಿಕೊಂಡಂತೆ ಎಂಬಂತಾಗಿದೆ. ಅಂದ ಹಾಗೆ ದೀನದಯಾಳ್ ಯಾವ ದೊಣ್ಣೆ ನಾಯಕನೆಂದು ಮೇಲ್ಸೇತುವೆಗೆ ಹೆಸರಿಟ್ಟಿದ್ದೀರಿ? ಎಂದು ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ.

ಈಗಿನ ಹಲವು ಬಿಜೆಪಿ ನಾಯಕರು ಇಂದಿರಾ ಗಾಂಧಿಯವರ ಗರೀಬಿ ಹಠವೋ ಕಾರ್ಯಕ್ರಮದ ಫಲಾನುಭವಿಗಳೇ, ಸಿ.ಟಿ.ರವಿ ಕೂಡ ಅದರಲ್ಲಿ ಒಬ್ಬರು. ಇಂದಿರಾ ಗಾಂಧಿಯವರ ಗರೀಭಿ ಹಠಾವೋ ಕಾರ್ಯಕ್ರಮ ಇಲ್ಲದೇ ಇದ್ದಿದ್ದರೆ. ಸಿ.ಟಿ.ರವಿ ಇಂದು ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಕೊಟ್ಟಿಗೆಯಲ್ಲಿ ಸೆಗಣಿ ಬಾಚುತ್ತಿದ್ದರು ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸಿ.ಟಿ.ರವಿ ಅವರನ್ನು ತರಾಟೆಗೆತ್ತಿಕೊಂಡಿದೆ.

ಇನ್ನಷ್ಟು ಸುದ್ದಿಗಳು…

ಮೊದಲು ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಬದಲಾವಣೆ ಮಾಡಲಿ | ಸಿ.ಟಿ.ರವಿಗೆ ಸಿದ್ದರಾಮಯ್ಯ ಸವಾಲು

3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ

ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿವರೆಗೆ ಬರೇ ಲೀಡರ್ ಗಳೇ ತುಂಬಿದ್ದಾರೆ | ಬಿಜೆಪಿ ಕಾರ್ಯಕರ್ತರನ್ನು ಹೊಗಳಿದ ಸಿಎಂ ಬೊಮ್ಮಾಯಿ

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಇತ್ತೀಚಿನ ಸುದ್ದಿ