‘ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ’: 22 ದಿನಗಳ ನಂತರವೂ ಸಿಗದ ಚಿರತೆ - Mahanayaka
6:10 PM Thursday 12 - December 2024

‘ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ’: 22 ದಿನಗಳ ನಂತರವೂ ಸಿಗದ ಚಿರತೆ

belagavi
26/08/2022

ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ರಾಜಾರೋಷವಾಗಿ ತಿರುಗಾಡುತ್ತಿದ್ದು,  ದಿನವೊಂದಕ್ಕೆ 3 ಲಕ್ಷ ರೂ.ವರೆಗೆ ಖರ್ಚಾಗುತ್ತಿರೋದು ಬಿಟ್ಟರೆ, ಈವರೆಗೆ ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಈ ನಡುವೆ ಸಾರ್ವಜನಿಕರು ವಿವಿಧ ಟ್ರೋಲ್ ಗಳ ಮೂಲಕ ಸರ್ಕಾರದ ನಿರ್ಲಕ್ಷ್ಯತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವರು ಚಿರತೆಯ ಫೋಟೋ ಹಾಕಿ ಆಧಾರ್ ಕಾರ್ಡ್ ರೆಡಿ ಮಾಡಿದ್ದು, ಚಿರತೆ ಇಲ್ಲೇ ಶಾಶ್ವತವಾಗಿ ವಾಸ ಮಾಡುತ್ತದೆ ಎನ್ನುವುದನ್ನು ಪರೋಕ್ಷವಾಗಿ ಬಿಂಬಿಸಿದ್ದಾರೆ. ಹೀಗೆ ಚಿರತೆಯ ಫೋಟೋ ಹಾಕಿ ವಿವಿಧ ರೀತಿಯ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.

ಟ್ರೋಲ್ ಗಳ ಪೈಕಿ ಒಂದು ಚಿತ್ರ ವಿಶೇಷವಾಗಿ ಗಮನ ಸೆಳೆಯುತ್ತಿದ್ದು,  ‘ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ’ ಎಂದು ಚಿರತೆ ಹೇಳುವಂತೆ ಫೋಟೋ ತಯಾರಿಸಿ ಟ್ರೋಲ್ ಮಾಡಲಾಗಿದೆ.   ನಾನೇನು ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ ಎಂದು ಚಿರತೆ ವಿವಿಧ ರೀತಿಯಲ್ಲಿ ಪ್ರಶ್ನಿಸುವ ಫೋಟೋ ಚಿತ್ರಿಸಲಾಗಿದೆ.

ಕಳೆದ 22 ದಿನಗಳಿಂದ ಗಾಲ್ಫ್ ಮೈದಾನದಲ್ಲಿ ಚಿರತೆಗಾಗಿ ಹುಡುಕುತ್ತಲೇ ಇದ್ದಾರೆ. ಆದರೆ, ಈವರೆಗೆ ಚಿರತೆ ಸಿಕ್ಕಿಲ್ಲ. ಒಂದೆಡೆ ಸಾರ್ವಜನಿಕರ ದುಡ್ಡು ನೀರಿನಿಂತೆ ಖರ್ಚು ಮಾಡಲಾಗುತ್ತಿದೆ. ವರದಿಗಳ ಪ್ರಕಾರ ದಿನವೊಂದಕ್ಕೆ 3 ಲಕ್ಷ ರೂಪಾಯಿಗಳು ಖರ್ಚಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತ ಖರ್ಚಾದರೂ ಚಿರತೆಯನ್ನು ಹಿಡಿಯಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ