ಸೆ.26ರಂದು ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ | ಅವರ ಕಿರುಪರಿಚಯ ಇಲ್ಲಿದೆ - Mahanayaka
10:21 AM Thursday 12 - December 2024

ಸೆ.26ರಂದು ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ | ಅವರ ಕಿರುಪರಿಚಯ ಇಲ್ಲಿದೆ

yathish kumar
25/09/2021

ತುಮಕೂರು: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ನೀಡುತ್ತಿರುವ ಶಿಕ್ಷಕ ರತ್ನ ಪ್ರಶಸ್ತಿಗೆ, ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರು ಪಾತ್ರರಾಗಿದ್ದು, ಸೆ.26ರಂದು ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ಸಂದರ್ಭದಲ್ಲಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷನಟರಾಜು ಜಿ.ಎಲ್., ಖಜಾಂಚಿ ಮಹಮದ್ ಗೌಸ್ ಪೀರ್, ನಿರ್ದೇಶಕ ಪವನ್ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಯತೀಶ್ ಕುಮಾರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಯತೀಶ್ ಕುಮಾರ್  ಅವರ ಕಿರು ಪರಿಚಯ

ಚಿಕ್ಕಂದಿನಿಂದ ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುವ ಯತೀಶ್‍ಕುಮಾರ್ 20/10/1980 ರಲ್ಲಿ ತುಮಕೂರು ಜಿಲ್ಲೆ, ಗುಬ್ಬಿ ತಾ|| ಕಡಬ ಹೋಬಳಿ, ಕಲ್ಲೂರು ಗ್ರಾಮದ ಕೆರೆಬಂಡಿಪಾಳ್ಯ ಎಂಬ ಚಿಕ್ಕ ಹಳ್ಳಿಯಲ್ಲಿ ಬಡಕುಟುಂಬಕ್ಕೆ ಸೇರಿದ ಡ್ರಾಮಾ ಮಾಸ್ಟರ್ ಮತ್ತು ಸಂಗೀತ ವಿದ್ವಾಂಸರಾದ ದಿವಂಗತ ಶ್ರೀ. ಹನುಮಂತಯ್ಯ ಶ್ರೀಮತಿ ಅನುಸೂಯಮ್ಮನವರ ದ್ವಿತೀಯ ಪುತ್ರನಾಗಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ, ಕಲ್ಲೂರಿನಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆಯಲ್ಲಿ 8 ನೇ ತರಗತಿ ಪ್ರವೇಶ ಪಡೆದಾಗ ಅಲ್ಲಿ ಇದ್ದ ಚಿತ್ರಕಲಾ ಶಿಕ್ಷಕರಾದ ಓಂಕಾರಮೂರ್ತಿ (ಓ.ಎಂ.) ರವರ ಮಾರ್ಗದರ್ಶನದಂತೆ ಚಿತ್ರಕಲಾ ಅಭ್ಯಾಸವನ್ನ ಮಾಡುತ್ತಾ ಉನ್ನತ ಚಿತ್ರಕಲಾ ಶಿಕ್ಷಣವನ್ನು ಪಡೆಯಲು ತುಮಕೂರಿನ “ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ”ದಲ್ಲಿ ಪ್ರವೇಶ ಪಡೆದು 2002 ರಲ್ಲಿ ಡಿ.ಎಂ.ಸಿ. (ಡ್ರಾಯಿಂಗ್ ಮಾಸ್ಟರ್ ಕೋರ್ಸ್) ಎಂಬ ಪದವಿಯನ್ನು ಮುಗಿಸಿದರು. ನಂತರ 2005 ರಲ್ಲಿ ಆರ್ಟ್ ಮಾಸ್ಟರ್ (ಎ.ಎಂ.) ಪದವಿಯನ್ನು ಪ್ರಥಮ ದರ್ಜೆಯಲ್ಲಿ ಹಾಗೂ 2006 ರಲ್ಲಿ ಡ್ರಾಯಿಂಗ್ ಅಂಡ್ ಪೈಂಟಿಂಗ್ ಡಿಪ್ಲೊಮಾ (ಜಿ.ಡಿ. ಗ್ರಾಜುಯೇಟ್ ಡ್ರಾಯಿಂಗ್ ಡಿಪ್ಲೊಮಾ) ಎಂಬ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಮುಗಿಸಿದರು. ನಂತರ 2009 ರಲ್ಲಿ ಬಿ.ಎಫ್.ಎ. (ಬ್ಯಾಚುಲರ್ ಆಫ್ ಫೈನ್ ಆರ್ಟ್) ಎಂಬ ಪದವಿಯನ್ನು ತುಮಕೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ ಪ್ರಥಮ ರ್ಯಾಂಕ್ ಪಡೆದರು.

2010 ನೆಯ ಮಾರ್ಚ್ 3 ಬುಧವಾರದಂದು ನಡೆದ ತುಮಕೂರು ವಿಶ್ವವಿದ್ಯಾಲಯದ ತೃತೀಯ ಘಟಿಕೋತ್ಸವದಲ್ಲಿ ಬಿ.ಎಫ್.ಎ.(ಬ್ಯಾಚುಲರ್ ಆಫ್ ಫೈನ್ ಆರ್ಟ್) ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಯಾದ  ಶ್ರೀ ಯತೀಶ್ ಕುಮಾರ್ ರವರಿಗೆ ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಅಂದು ಕರ್ನಾಟಕ ರಾಜ್ಯಪಾಲರಾದ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಘನತೆವೆತ್ತ ಸನ್ಮಾನ್ಯ ಶ್ರೀ. ಹೆಚ್.ಆರ್.ಭಾರದ್ವಾಜ್ ರವರು ಸುವರ್ಣಪದಕ ಮತ್ತು ರ್ಯಾಂಕ್ ಸರ್ಟಿಫಿಕೇಟ್ ಕೊಟ್ಟು ಗೌರವಿಸಿದರು.

ಚಿತ್ರಕಲಾ ಶಿಕ್ಷಕ ವೃತ್ತಿಯ ಹಾದಿಯಲ್ಲಿ

ಚಿತ್ರಕಲಾ ಶಿಕ್ಷಕ ವೃತ್ತಿ :– ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 103ನೇ ವರ್ಷದ ಹುಟ್ಟುಹಬ್ಬದ ದಿನದಂದು 2010 ನೆಯ ಏಪ್ರಿಲ್ 1ನೇ ತಾರೀಖು ಗುರುವಾರದಿಂದ ಚಿತ್ರಕಲಾ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸುತ್ತಾ ಮೊದಲಿಗೆ,

  • 2010 ರಿಂದ 2013 ರವರೆಗೆ (3 ವರ್ಷ) ಕೇಂದ್ರೀಯ ವಿದ್ಯಾಲಯ-ಹಾಸನ.
  • 2014 ರಿಂದ 2015 ರವರೆಗೆ (1 ವರ್ಷ) ಕೇಂದ್ರೀಯ ವಿದ್ಯಾಲಯ-ತುಮಕೂರು.

ಇಲ್ಲಿ ಗುತ್ತಿಗೆ ಆಧಾರದ ಮೇಲೆ ಚಿಕ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ನಂತರ,

  • 2015 ರಿಂದ 2021 ರವರೆವಿಗೂ ತುಮಕೂರಿನ ಹೆಸರಾಂತ ವರಿನ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ 6 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ ಮುಂದುವರೆದಿದ್ದು ಒಟ್ಟು 10 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ……..

ಶ್ರೀ. ಯತೀಶ್ ಕುಮಾರ್ ಆದ ಇವರು ತುಮಕೂರು ವಿಶ್ವವಿದ್ಯಾಲಯ ಪಿ.ಜಿ.ಸೆಂಟರ್‍ನಲ್ಲಿರುವ ಬಿ.ಎಫ್.ಎ.(ಬ್ಯಾಚುಲರ್ ಆಫ್ ಫೈನ್ ಆರ್ಟ್) ಪದವಿಯನ್ನು ಮಾಡುತ್ತಿರುವ ಸಂಧರ್ಭದಲ್ಲಿ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಗುಬ್ಬಿ ತಾಲ್ಲೂಕಿನ ಹಳ್ಳಿ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಮಕ್ಕಳ ಕಲಾ ಅಕಾಡೆಮಿಯನ್ನು ದಿನಾಂಕ: 19/08/2007 ರಲ್ಲಿ ಪ್ರಾರಂಭಿಸಲಾಯಿತು. ಈ ತರಬೇತಿಯಲ್ಲಿ ಚಿತ್ರಕಲೆ, ಅಕ್ಷರ ಬರಹ, ಥರ್ಮೋಕೋಲ್ ಕಟ್ಟಿಂಗ್, ಕ್ರಾಫ್ಟ್ ಫ್ಯಾಬ್ರಿಕ್ ಪೈಂಟಿಂಗ್, ಕಸದಿಂದ ಕಲೆ, ಹೀಗೆ ಅನೇಕ ವಿಷಯಗಳ ಮೇಲೆ ತರಬೇತಿಯನ್ನು ನೀಡಲಾಗುತ್ತಿತ್ತು. ಇಲ್ಲಿ ತರಬೇತಿ ಪಡೆದ ಮಕ್ಕಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಮತ್ತು ಚಿನ್ನದ ಪದಕದ ಸರ್ಟಿಫಿಕೇಟ್ ಪಡೆದಿದ್ದಾರೆ. ಹೀಗೆ ಇಲ್ಲಿ ತರಬೇತಿ ಪಡೆದ ಮಕ್ಕಳಿಗೆ ರಾಷ್ಟ್ರೀಯ ರಾಜ್ಯ ಪ್ರಶಸ್ತಿಗಳು ಲಭಿಸಿವೆ.

ಕೇಂದ್ರೀಯ ವಿದ್ಯಾಲಯ ಹಾಸನ, ಕೇಂದ್ರೀಯ ವಿದ್ಯಾಲಯ ತುಮಕೂರು, ತುಮಕೂರಿನ ಹೆಸರಾಂತ ಖಾಸಗಿ ಶಾಲೆಯಾದ ವರಿನ್ ಅಂತರಾಷ್ಟ್ರೀಯ ವಸತಿ ಶಾಲೆಯ ಮಕ್ಕಳು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರಶಸ್ತಿಗಳು, ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಹಾಗೂ ತರಬೇತಿ ನೀಡಿದ ಚಿತ್ರಕಲಾ ಶಿಕ್ಷಕರಿಗೆ “ಅತ್ಯುತ್ತಮ ಚಿತ್ರಕಲಾ ಶಿಕ್ಷಕ” ಪ್ರಶಸ್ತಿಗಳು ಲಭಿಸಿರುತ್ತವೆ.

  • 2018 ರಿಂದ ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಲಾ ಸೇವೆಯಲ್ಲಿ ತೊಡಗಿರುತ್ತಾರೆ.
  • ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ). ಹಾಸನ (ಖಾಸಗಿ ಶಿಕ್ಷಕರು ಹಾಗೂ ಉಪನ್ಯಾಸಕರ ಒಕ್ಕೂಟ)

ಶಿಕ್ಷಕರ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ 2021 ಸೆಪ್ಟೆಂಬರ್ 26 ರಂದು ಹಾಸನ ಜಿಲ್ಲೆಯ ಕಲಾ ಭವನದಲ್ಲಿ ರಾಜ್ಯ ಮಟ್ಟದ ಉತ್ತಮ ಖಾಸಗಿ ಶಿಕ್ಷಕರಿಗೆ ಕೊಡಮಾಡುವ “ಡಾ|| ಎಸ್.ರಾಧಾಕೃಷ್ಣನ್ ಶಿಕ್ಷಕರತ್ನ ಪ್ರಶಸ್ತಿ”ಯನ್ನು ಸನ್ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ರವರು ಕೊಟ್ಟು ಗೌರವಿಸಿದರು. ಈ ಸಮಾರಂಭದಲ್ಲಿ ಮಾನ್ಯ ಪೋಲೀಸ್ ವರಿಷ್ಠಾಧಿಕಾರಿಗಳು ಸಿ.ಐ.ಡಿ. ಆದ ಶ್ರೀ. ರವಿ ಡಿ ಚನ್ನಣ್ಣನವರ್ ಐ.ಪಿ.ಎಸ್. ಹಾಗೂ ಗಣ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಅ.2: ದ.ಕ. ಬಾಮ್ಸೆಫ್ ನಿಂದ ಪೂನಾ ಒಪ್ಪಂದ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಯಾಗಾರ

ಅಸ್ಪೃಶ್ಯತೆ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು ಬದಲಾವಣೆಗೆ ಶ್ರಮಿಸಬೇಕು | ಡಿವೈಎಸ್ ಪಿ ರಮೇಶ್

ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ

ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ

ಹಾಲು ಬೇಕೆಂದು ಹಠ ಮಾಡುತ್ತಿದ್ದ ಮಗುವನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದ ತಾಯಿ!

ಇತ್ತೀಚಿನ ಸುದ್ದಿ