ಯತೀಶ್ ಕುಮಾರ್ ರವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರವಿ ಡಿ. ಚೆನ್ನಣ್ಣನವರ್ - Mahanayaka
11:24 PM Wednesday 10 - September 2025

ಯತೀಶ್ ಕುಮಾರ್ ರವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರವಿ ಡಿ. ಚೆನ್ನಣ್ಣನವರ್

yathish kumar
30/09/2021

ತುಮಕೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ 2021 ನೇ ಸೆಪ್ಟಂಬರ್ 26 ರಂದು ಹಾಸನ ಜಿಲ್ಲೆಯ ಹಾಸನಾಂಬ ಕಲಾಭವನದಲ್ಲಿ ರಾಜ್ಯಮಟ್ಟದ ಸೃಜನಶೀಲ ಉತ್ತಮ ಖಾಸಗಿ ಶಿಕ್ಷಕರಿಗೆ  “ಡಾ.ಎಸ್.ರಾಧಾಕೃಷ್ಣನ್ ಶಿಕ್ಷಕರತ್ನ ಪ್ರಶಸ್ತಿ”ಯನ್ನು ತುಮಕೂರಿನ ಹೆಸರಾಂತ ವರಿನ್ ಅಂತರಾಷ್ಟ್ರೀಯ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಯತೀಶ್ ಕುಮಾರ್ ರವರಿಗೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿ ಸಿ.ಐ.ಡಿ ಆದ ರವಿ .ಡಿ ಚೆನ್ನಣ್ಣನವರ್ ಐ.ಪಿ.ಎಸ್ ರವರು ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೌರವಿಸಿದರು.


Provided by

ಈ ಸಮಾರಂಭದಲ್ಲಿ ಪಿ.ಜಿ.ಆರ್ ಸಿಂಧ್ಯಾರವರು ರಾಜ್ಯ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ & ಗೈಡ್ ಕರ್ನಾಟಕ ರಾಜ್ಯ . ಬನವಾಸಿ ರಂಗಸ್ವಾಮಿಯವರು ಕಾಂಗ್ರೆಸ್ ಮುಖಂಡರು, ವಿಧಾನಸಭಾ ಕ್ಷೇತ್ರ ಹಾಸನ. ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಹಾಸನ ಜಿಲ್ಲೆಯ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಾಗೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರೆವೇರಿತು. “ಶಿಕ್ಷಕ ರತ್ನ” ಪ್ರಶಸ್ತಿ ಭಾಜನರಾದ ಯತೀಶ್ ಕುಮಾರ್ ರವರಿಗೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ನಟರಾಜು ಜಿ.ಎಲ್. ಹಾಗೂ ಪವನ್ ಆರ್., ಮಹಮ್ಮದ್ ಗೌಸ್ ಪೀರ್, ಹಾಗೂ ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಸದಸ್ಯರು ಶುಭ ಕೋರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ

ಮಂಗಳೂರು: ನಿಮ್ಮ ವಾಹನದ ವಿಮೆ ಅವಧಿ ಮುಗಿದಿದ್ದರೆ 4 ಸಾವಿರದವರೆಗೆ ದಂಡ ಖಚಿತ

ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆಗೆ ಹೊಸ ತಿರುವು: ನಾಪತ್ತೆಯಾದ ದಿನ ಹಣ ಡ್ರಾ ಮಾಡಿದ್ದ ಗಿರಿರಾಜ್!

ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ಹಲ್ಲೆ

ವ್ಯಕ್ತಿಗೆ ಕೊವಿಡ್ ಲಸಿಕೆಯ ಬದಲು ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಿದ ನರ್ಸ್!

ಇತ್ತೀಚಿನ ಸುದ್ದಿ