ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯುವಕನ ಭಕ್ತಿ ಯಾತ್ರೆ; ಪ್ರೀತಿಯ ಬಸವನನ್ನು ಮಂಜುನಾಥನಿಗೆ ಅರ್ಪಿಸಿದ ಯುವಕ - Mahanayaka
8:29 PM Wednesday 5 - February 2025

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯುವಕನ ಭಕ್ತಿ ಯಾತ್ರೆ; ಪ್ರೀತಿಯ ಬಸವನನ್ನು ಮಂಜುನಾಥನಿಗೆ ಅರ್ಪಿಸಿದ ಯುವಕ

basava
14/11/2022

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ವಿಧ ದಾನಗಳಿಗೆ ಪ್ರಸಿದ್ಧಿಯಾದರೂ, ಭಕ್ತರು ತಾವು ಬೆಳೆದ ಬೆಳೆ, ಸಾಕಿದ ಗೋವುಗಳನ್ನು ಧರ್ಮಸ್ಥಳಕ್ಕೆ ದಾನವಾಗಿ ನೀಡುತ್ತಾರೆ.

ಬೆಂಗಳೂರು ಮೂಲದ ಭಕ್ತರೊಬ್ಬರು ಕ್ಷೇತ್ರಕ್ಕೆ‌ನೀಡಿದ ಗೋದಾನ ಬಹಳ ವಿಶೇಷತೆ ಹೊಂದಿದೆ. ಬೆಂಗಳೂರಿನ ಜಿಗಣಿ ನಿವಾಸಿ ಶ್ರೇಯಾಂಸ್ ಜೈನ್ ತನ್ನಿಷ್ಟದ ಗಿರ್ ಜಾತಿಯ ಬಸವನನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದಾನವಾಗಿ ನೀಡಿದ್ದಾರೆ‌.

1 ವರ್ಷ 9 ತಿಂಗಳ “ಭೀಷ್ಮ” ಎಂಬ ಹೆಸರಿನ ಈ ಬಸವನನ್ನು ಶ್ರೇಯಾಂಸ್ ಅವರು ಜಿಗಣಿಯಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಮೂಲಕ ಬಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದಾನವಾಗಿ ನೀಡಿದ್ದಾರೆ. ಖಾಸಗಿ ಕಂಪೆನಿ ಉದ್ಯೋಗಿ ಶ್ರೇಯಾಂಸ್ ಪಾದಯಾತ್ರೆ ಸಂದರ್ಭ ವರ್ಕ್ ಫ್ರಂ ಹೋಮ್‌ ಕೆಲಸ ಮಾಡುತ್ತಾ 36 ದಿನದಲ್ಲಿ 360 ಕಿಲೋ ಮೀಟರ್ ದೂರದ ಧರ್ಮಸ್ಥಳ ತಲುಪಿ ದಾನ ನೀಡಿದ್ದಾರೆ.

ಭೀಷ್ಮನಿಗೆ ಸಹಕಾರಿಯಾಗಲು ಹಳ್ಳಿದಾರಿಯನ್ನೇ ಆಯ್ಕೆ ಮಾಡಿದ ಶ್ರೇಯಾಂಸ್, ಬಸವನಿಗೆ ಯಾವುದೇ ಒತ್ತಡ ಹೇರದೆ ಆತ ನಡೆದಷ್ಟೇ ದೂರವನ್ನು ಕ್ರಮಿಸಿ ಧರ್ಮಸ್ಥಳ ತಲುಪಿದ್ದಾರೆ. ಮುಂಜಾನೆ‌ 4 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಭೀಷ್ಮನ ಜೊತೆ ಪಾದಯಾತ್ರೆ ಮಾಡಿ ಬಳಿಕ‌ ಕಚೇರಿ ಕೆಲಸವನ್ನೂ ಮಾಡುತ್ತಿದ್ದರು.

ಭೀಷ್ಮನೂ ತನ್ನ ಮಾಲೀಕನನ್ನೇ ಹಿಂಬಾಲಿಸುತ್ತಾ ಹೇಳಿದ ಮಾತನ್ನು ಕೇಳುತಿತ್ತು. ಇದೀಗ ಇಬ್ಬರೂ ಧರ್ಮಸ್ಥಳ ತಲುಪಿದ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ “ಭೀಷ್ಮ”ನನ್ನು ಒಪ್ಪಿಸಿ, ಶ್ರೇಯಾಂಸ್ ತಮ್ಮ‌ಮನದಾಸೆ ತೀರಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ