ಯಡಿಯೂರಪ್ಪ ನಂಬಿದವರನ್ನು ಯಾವತ್ತೂ ಕೈ ಬಿಡುವುದಿಲ್ಲ: ಶಾಸಕ ಎನ್.ಮಹೇಶ್
ಕೊಳ್ಳೇಗಾಲ: ಯಡಿಯೂರಪ್ಪನವರು ನಂಬಿದವರನ್ನು ಯಾವತ್ತೂ ಕೈ ಬಿಡುವುದಿಲ್ಲ ಒಂದು ಹಂತಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.
ವಿಜಯ ಸಂಕಲ್ಪ ಯಾತ್ರೆಯನ್ನುದ್ದೇಶಿಸಿ ಮಾಜಿ ಸಿಎಂ ಯಡಿಯೂರಪ್ಪನವರ ಭಾಷಣಕ್ಕೂ ಮೊದಲು, ಕ್ಷೇತ್ರದಲ್ಲಿ ಹರಡಿದ್ದ ವದಂತಿಗಳಿಗೆ ಎನ್.ಮಹೇಶ್ ಸ್ಪಷ್ಟನೆ ನೀಡಿದರು.
ಇಂದು ಕೊಳ್ಳೇಗಾಲಕ್ಕೆ ಯಡಿಯೂರಪ್ಪ ಬರಲ್ಲ ಎಂಬ ಗುಮಾನಿ ಹಬ್ಬಿಸಿದ್ರು, ಆದ್ರೆ ಯಡಿಯೂರಪ್ಪ ಒಮ್ಮೆ ಕೊಟ್ಟ ಮಾತಿಗೆ ತಪ್ಪಲ್ಲ, ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಎಂದು ಹೇಳಿದರು.
ಇನ್ನೂ ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ಎನ್.ಮಹೇಶ್ ಕುರಿತು ಮಾತನಾಡುತ್ತಾ, ಎನ್.ಮಹೇಶ್ ಅವರಿಂದ ನಾವು ಕಲಿಯುವುದು ಸಾಕಷ್ಟಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw