ಯಡಿಯೂರಪ್ಪ ಆಡಳಿತದಲ್ಲಿ ದಲಿತರಿಗೆ ಮೂತ್ರ ಕುಡಿಸಲಾಯಿತು | ರಾಜ್ಯಕ್ಕೆ ಕಪ್ಪು ಚುಕ್ಕೆ
ಬೆಂಗಳೂರು: ಅಮಾಯಕ ದಲಿತ ಯುವಕನನ್ನು ಬಂಧಿಸಿ, ಸಹಕೈದಿಯಿಂದ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಪಿಎಸ್ ಐ ಅರ್ಜುನ್ ನನ್ನು ಅಮಾನತುಗೊಳಿಸಿ ಬಂಧಿಸುವಂತೆ ವ್ಯಾಪಕವಾಗಿ ಒತ್ತಾಯಗಳು ಕೇಳಿ ಬಂದಿವೆ.
ರಾಜ್ಯದಲ್ಲಿ ಇಷ್ಟೊಂದು ನೀಚ ಕೃತ್ಯ ನಡೆದಿದ್ದರೂ, ಸಿಎಂ ಯಡಿಯೂರಪ್ಪನವರಾಗಲಿ, ಗೃಹಸಚಿವ ಬಸವರಾಜ್ ಬೊಮ್ಮಾಯಿಯವರಾಗಿ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಪರೋಕ್ಷವಾಗಿ ಆರೋಪಿಗೆ ಬೆಂಬಲ ನೀಡುತ್ತಿದ್ದಾರೆಯೇ? ಎನ್ನು ಪ್ರಶ್ನೆಗಳು ಕೇಳಿ ಬಂದಿದೆ.
ಯಡಿಯೂರಪ್ಪ ತಮ್ಮ ಆಡಳಿತ ಅವಧಿಯಲ್ಲಿ ದಲಿತರಿಗೆ ಮೂತ್ರ ಕುಡಿಸಿದವರು ಎನ್ನುವ ಕಪ್ಪು ಚುಕ್ಕೆ ಬರುವ ಮೊದಲು ಯಡಿಯೂರಪ್ಪ ಆರೋಪಿ ಪಿಎಸ್ ಐ ಅರ್ಜುನ್ ನನ್ನು ಅಮಾನತು ಮಾಡಿ, ಬಂಧಿಸಿ, ತಕ್ಕ ಶಿಕ್ಷೆ ವಿಧಿಸಬೇಕು ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಪುನೀತ್ ಮೇಲೆ ನಡೆದ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪುನೀತ್ ಪರ ಧ್ವನಿಗಳು ಗಟ್ಟಿಯಾಗುತ್ತಿವೆ. ಸಿಎಂ ಯಡಿಯೂರಪ್ಪನವರು ದಲಿತರ ವಿರೋಧಿಯಂತೆ ವರ್ತಿಸಬಾರದು. ಗೃಹ ಸಚಿವರು ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿಗೆ ಇದು ಶಾಶ್ವತ ಕಪ್ಪು ಚುಕ್ಕೆಯಾಗಬಹುದು. ಎಲ್ಲೋ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದಂತಹ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿದೆ ಎಂದಾದರೆ, ಇಡೀ ರಾಜ್ಯಕ್ಕೆ ಇದು ಕಳಂಕವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ದಲಿತ ಯುವಕನ ಮೇಲೆ ನಡೆದ ದೌರ್ಜನ್ಯವನ್ನು ಹಿರಿಯ ಪತ್ರಕರ್ತ ನಾಗರಾಜ್ ಹೆತ್ತೂರು ಅವರು ತಮ್ಮ ಭೀಮ ವಿಜಯ ಪತ್ರಿಕೆಯ ಮೂಲಕ ಬೆಳಕಿಗೆ ತಂದಿದ್ದರು. ಮಹಾನಾಯಕ ಮಾಧ್ಯಮದಲ್ಲಿಯೂ ಈ ಸುದ್ದಿಯನ್ನು ಯಥಾವತ್ತಾಗಿ ಪ್ರಕಟಿಸಲಾಗಿತ್ತು. ಈ ಸುದ್ದಿಗಳ ಬೆನ್ನಲ್ಲೇ ರಾಜ್ಯಾದ್ಯಂತ ಈ ಪ್ರಕರಣ ತೀವ್ರತೆ ಪಡೆದುಕೊಂಡಿದೆ.