ದೆಹಲಿಗೆ ತೆರಳಿದ ಸಿಎಂಗೆ ನಿರಾಸೆ | ಯಡಿಯೂರಪ್ಪ ಭೇಟಿಯಂದೇ ತಪ್ಪಿಸಿಕೊಂಡ ಅಮಿತ್ ಶಾ!
19/11/2020
ಬೆಂಗಳೂರು: ದೆಹಲಿಗೆ ಪ್ರಯಾಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ನಿರಾಸೆಯಿಂದ ವಾಪಸ್ ಬಂದಿದ್ದು, ಅಮಿತ್ ಶಾ ಭೇಟಿಗೆ ಅವರಿಗೆ ಅವಕಾಶ ಸಿಗಲಿಲ್ಲ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಅವರ ಜೊತೆಗೆ ಕೇವಲ 15 ನಿಮಿಷ ಚರ್ಚೆ ನಡೆಸಿ ಅವರು ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ.
ಬಿಎಸ್ ವೈ ಅವರು ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದರು. ಬುಧವಾರ ಯಡಿಯೂರಪ್ಪನವರು ದೆಹಲಿಗೆ ಬರಲಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಅಮಿತ್ ಶಾ ಉದ್ದೇಶ ಪೂರ್ವಕವಾಗಿ ತಪ್ಪಿಸಿಕೊಂಡಿದ್ದಾರೆ ಎಂಬ ಮಾತುಗಳು ಸದ್ಯ ವ್ಯಾಪಕವಾಗಿ ಕೇಳಿ ಬಂದಿದೆ.
ಯಡಿಯೂರಪ್ಪನವರು ಸಿಎಂ ಆದ ಬಳಿಕ ಪ್ರತಿ ಬಾರಿಯೂ ದೆಹಲಿ ಹೈಕಮಾಂಡ್ ಅವರಿಂದ ಅಂತರ ಕಾಯ್ದುಕೊಂಡು ಬರುತ್ತಿದೆ. ಯಡಿಯೂರಪ್ಪನವರು ಎಂದರೆ ಹೈಕಮಾಂಡ್ ಗೆ ಅಷ್ಟಕ್ಕಷ್ಟೆ ಎಂಬ ಬಿಜೆಪಿ ಶಾಸಕರ ಮಾತುಗಳು ಸದ್ಯ ನಿಜ ಎಂಬಂತೆ ಕಂಡು ಬರುತ್ತಿದೆ.