ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ! - Mahanayaka
3:25 AM Monday 15 - September 2025

ಯಡಿಯೂರಪ್ಪ ಕಣ್ಣೀರು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ರಾಜಾಹುಲಿ!

yediyurappa tears rajahuli suicide
27/07/2021

ಚಾಮರಾಜನಗರ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಬಿ.ಎಸ್.ಯಡಿಯೂರಪ್ಪನವರು ಕಣ್ಣೀರು ಹಾಕಿದ ವಿಡಿಯೋವನ್ನು ನೋಡಿ ಮನನೊಂದ ಅವರ ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.


Provided by

35 ವರ್ಷ ವಯಸ್ಸಿನ ರವಿ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು, ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಿದ್ದಂತೆಯೇ ಆತ ಮಂಕಾಗಿದ್ದ ಎಂದು ಹೇಳಲಾಗಿದೆ. ಯಡಿಯೂರಪ್ಪನವರು ಕಣ್ಣೀರು ಹಾಕಿರುವುದನ್ನು ನೋಡಿ ನನಗೆ ತುಂಬಾ ನೋವಾಗಿದೆ ಎಂದು ರವಿ, ತಮ್ಮ ಗ್ರಾಮದ ಗುರುಸ್ವಾಮಿ ಎಂಬವರ ಬಳಿಯಲ್ಲಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ. ರಾತ್ರಿಯವರೆಗೂ ರವಿ ಇದೇ ಬೇಸರದಲ್ಲಿದ್ದ ಎಂದು ತಿಳಿದು ಬಂದಿದೆ. ಬೆಳಗ್ಗೆ ಅವನ ಕ್ಯಾಂಟಿನ್ ಬಳಿಗೆ ಹೋದ ವೇಳೆ ಆತ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಯಡಿಯೂರಪ್ಪನವರ ಮೇಲೆ ತೀವ್ರ ಅಭಿಮಾನವನ್ನು ಹೊಂದಿದ್ದ ರವಿ, 2017ರ ಉಪ ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲು ಯಡಿಯೂರಪ್ಪನವರು ಆಗಮಿಸಿದ್ದ ವೇಳೆ ಅವರ ಜೊತೆಗೆ ಊರೂರು ಸುತ್ತಿದ್ದ ಎಂದು ಹೇಳಲಾಗಿದೆ. ಮಾತೆತ್ತಿದರೆ, ಯಡಿಯೂರಪ್ಪನವರ ಕುರಿತೇ ಮಾತನಾಡುತ್ತಿದ್ದ ಎಂದು ಹೇಳಲಾಗಿದೆ. ಈತನ ಅಭಿಮಾನಕ್ಕೆ ಜನರು ಈತನನ್ನು ರಾಜಾಹುಲಿ ಎಂದೇ ಕರೆಯುತ್ತಿದ್ದರು ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!

ಏರೆಗ್ಲಾ ಪನೋಡ್ಚಿ…! | “ನಳಿನ್ ಕುಮಾರ್ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಯಾರೆಂದು ತಿಳಿಯಿತು”

ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್

ಯಡಿಯೂರಪ್ಪ ವಿರೋಧಿ ಬಣದಿಂದ ಬ್ರಾಹ್ಮಣ ಸಿಎಂಗಾಗಿ ಒತ್ತಡ?

ರಾಜ್ ಕುಂದ್ರಾ 20-25 ನಿಮಿಷದ ಸಾಫ್ಟ್ ಅಶ್ಲೀಲ ಚಿತ್ರ ಮಾಡುತ್ತಿದ್ದರು: ತನ್ವೀರ್ ಹಶ್ಮಿ

ಇತ್ತೀಚಿನ ಸುದ್ದಿ