ಯಡಿಯೂರಪ್ಪ ವಿರೋಧಿ ಬಣದಿಂದ ಬ್ರಾಹ್ಮಣ ಸಿಎಂಗಾಗಿ ಒತ್ತಡ?
ಬೆಂಗಳೂರು: ಸಿಎಂ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಮುಂದಿನ ಸಿಎಂ ಯಾರು ಎಂಬ ಚರ್ಚೆಯ ಬಳಿಕ ಇದೀಗ ಯಾವ ಸಮುದಾಯದವರು ಸಿಎಂ ಆಗಬೇಕು ಎಂಬ ಚರ್ಚೆ ನಡೆಯುತ್ತಿದೆ.
ಸದ್ಯದ ಚರ್ಚೆಯ ಪ್ರಕಾರ ಯಡಿಯೂರಪ್ಪ ವಿರೋಧಿ ಬಣ ಬ್ರಾಹ್ಮಣ ಸಿಎಂ ಬಗ್ಗೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದರಲ್ಲಿ ಯಶಸ್ವಿಯಾದ ವಿರೋಧಿ ಬಣ ಇದೀಗ ಬ್ರಾಹ್ಮಣ ಸಿಎಂಗಾಗಿ ಒತ್ತಾಯ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ರಾಜ್ಯ ಬಿಜೆಪಿ ಹೊಡೆದು ಹೋಗಿದ್ದು, ಹಲವು ಬಣಗಳಾಗಿ ಪರಿವರ್ತನೆಯಾಗಿದೆ. ಈ ನಡುವೆ ಯಡಿಯೂರಪ್ಪ ಪರ ಇರುವ ನಾಯಕರು ಲಿಂಗಾಯಿತ ಅಥವಾ ಬೇರೆ ಯಾವುದೇ ಸಿಎಂ ಬಗ್ಗೆ ಒಲವು ಹೊಂದಿದ್ದರೆ, ಯಡಿಯೂರಪ್ಪ ವಿರೋಧಿಗಳು ಬ್ರಾಹ್ಮಣ ಸಿಎಂಗಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ
ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!
ಆತ್ಮಹತ್ಯೆಯ ಕೊನೆಯ ಕ್ಷಣದಲ್ಲಿ ಯುವತಿಯನ್ನು ರಕ್ಷಿಸಿದ ಪೊಲೀಸ್ | ವಿಡಿಯೋ ವೈರಲ್
ಬೆಳಗ್ಗೆ ಅಕ್ಕನ ಯೋಗದ ಭಂಗಿ, ಭಾವನಿಂದ ರಾತ್ರಿಯ ಭಂಗಿ | ಶಿಲ್ಪಾ ಶೆಟ್ಟಿಯ ತಂಗಿ ವಿರುದ್ಧ ಟ್ರೋಲ್