ಯಡಿಯೂರಪ್ಪಗೆ ದೇವರು ಒಳ್ಳೆಯದು ಮಾಡಲ್ಲ | ಬಿಎಸ್ ವೈಗೆ ಹಿಡಿಶಾಪ ಹಾಕಿದ ಎಚ್.ವಿಶ್ವನಾಥ್

13/01/2021

ಮೈಸೂರು: 17 ಜನ ಶಾಸಕರ ಭಿಕ್ಷೆ, ದೀಖ್ಷೆಯನ್ನು ಬಿ.ಎಸ್.ಯಡಿಯೂರಪ್ಪನವರು ನೆನೆಯ ಬೇಕಿತ್ತು. ಆದ್ರೆ ಅದು ಆಗಲಿಲ್ಲ.  ಯಡಿಯೂರಪ್ಪ ಅವರಿಗೆ ದೇವರು ಒಳ್ಳೆಯದು ಮಾಡಲ್ಲ ಎಂದು ಹಳ್ಳಿಹಕ್ಕಿ ಎಚ್.ವಿಶ್ವನಾಥ್ , ಸಿಎಂ ಯಡಿಯೂರಪ್ಪಗೆ ಹಿಡಿಶಾಪ ಹಾಕಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ 7 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಈ ಪೈಕಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ 17 ಶಾಸಕರಿಗೆ ಯಾವುದೇ ಪ್ರಾಮುಖ್ಯತೆ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುತ್ತಾರೆ ಎಂಬ ಮಾತು ಸುಳ್ಳಾಗಿದೆ. 17 ಶಾಸಕರ ತ್ಯಾಗ ವ್ಯರ್ಥವಾಗಿದೆ.  ಅರ್ಹರನ್ನು ಬಿಟ್ಟು, ಚುನಾವಣೆಯಲ್ಲಿ ಸೋತಿರುವ, ಹಲವು ಕ್ರಿಮಿನಲ್ ಕೇಸ್ ಗಳಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version