ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!

sandesh kulal
31/08/2021

ಉಡುಪಿ: ಉಡುಪಿ ಜಿಲ್ಲೆಯ ಸಂತೆಕಟ್ಟೆಬಳಿಯಲ್ಲಿ ನಿನ್ನೆ ಯುವಕನೋರ್ವ ಪ್ರೇಯಸಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆಸಿದ್ದು, ಯುವತಿ ಸೋಮವಾರ ಸಾವಿಗೀಡಾಗಿದ್ದರೆ, ಯುವಕ ಇಂದು ಸಾವಿಗೀಡಾಗಿದ್ದಾನೆ.

28 ವರ್ಷ ವಯಸ್ಸಿನ ಸೌಮ್ಯಶ್ರೀ ಸೋಮವಾರ ಮೃತಪಟ್ಟ ಯುವತಿಯಾಗಿದ್ದು, ಇಂದು 28 ವರ್ಷ ವಯಸ್ಸಿನ ಸಂದೇಶ್ ಕುಲಾಲ್  ಮೃತಪಟ್ಟಿದ್ದಾರೆ. ಸೌಮ್ಯಶ್ರೀ ಬ್ಯಾಂಕೊಂದರಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸಂದೇಶದ ಕುಲಾಲ್ ನಗರದ ಮೆಡಿಕಲ್ ಶಾಪ್ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದರು.

ಸಂದೇಶ್ ಕುಲಾಲ್ ಹಾಗೂ ಸೌಮ್ಯಶ್ರೀ ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು.  ಆದರೆ ಜಾತಿ ಮೊದಲಾದ ವಿಚಾರಕ್ಕೆ ಸಂಬಂಧಿಸಿದಂತೆ  ಪೋಷಕರು ಇವರ ಮದುವೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ಮೂಡುಬಿದಿರೆಯ ಯುವಕನೊಂದಿಗೆ  ಸೌಮ್ಯಶ್ರೀಗೆ ನಿಶ್ಚಿತಾರ್ಥ ನಡೆಸಲಾಗಿತ್ತು. ಇದರಿಂದ ಕೋಪಗೊಂಡ ಸಂದೇಶ್ ತನ್ನ ಪ್ರೇಯಸಿ ಜೊತೆಗೆ ಜಗಳವಾಡಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ಸೋಮವಾರ ಸಂಜೆ ತನ್ನ ಸ್ಕೂಟರ್ ನಲ್ಲಿ ಸೌಮ್ಯಶ್ರೀ ಮನೆಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಬಂದ ಸಂದೇಶ್ ಆಕೆಯನ್ನು ತಡೆದಿದ್ದು, ತನ್ನ ಬ್ಯಾಗ್ ನಲ್ಲಿದ್ದ ಚಾಕುವಿನಿಂದ ಸೌಮ್ಯಶ್ರೀಯ ಕತ್ತು ಕೊಯ್ದು ತನ್ನ ಕತ್ತನ್ನೂ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ತಕ್ಷಣವೇ ಸ್ಥಳೀಯರು ಇಬ್ಬರನ್ನು ಕೂಡ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು,  ಇದೀಗ ಇಬ್ಬರು ಕೂಡ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ | ಆರ್.ಅಶೋಕ್

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು

ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!

ಯೋಗಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್!

ಇತ್ತೀಚಿನ ಸುದ್ದಿ

Exit mobile version