ಎಲ್ಲಾ ಫೋಟೋ ಶೂಟ್ ಆಯ್ತು… ಈಗ ಫಸ್ಟ್ ನೈಟ್ ಫೋಟೋಶೂಟ್! - Mahanayaka
10:19 PM Wednesday 11 - December 2024

ಎಲ್ಲಾ ಫೋಟೋ ಶೂಟ್ ಆಯ್ತು… ಈಗ ಫಸ್ಟ್ ನೈಟ್ ಫೋಟೋಶೂಟ್!

photo shoot
13/04/2021

ಸೆಲ್ಫಿ ಹುಚ್ಚು ಸ್ವಲ್ಪ ಬದಲಾಗಿ ಇದೀಗ ಫೋಟೋ ಶೂಟ್ ಹುಚ್ಚಾಗಿ ಪರಿಣಮಿಸಿದೆ. ಮದುವೆ ಫೋಟೋ ಶೂಟ್, ಎಂಗೇಜ್ ಮೆಂಟ್ ಫೋಟೋಶೂಟ್, ವೆಡ್ಡಿಂಗ್ ಡೇ, ಹನಿಮೂನ್ ಈ ಎಲ್ಲಾ ರೀತಿಯ ಫೋಟೋ ಶೂಟ್ ಗಳನ್ನು ಕಂಡು, ಇನ್ನು ಫಸ್ಟ್ ನೈಟ್ ಫೋಟೋ ಶೂಟ್ ಇಲ್ಲದಿದ್ದರೆ ಸಾಕು ಎಂದು ತಮಾಷೆಗೆ ಎಲ್ಲರೂ ಹೇಳುತ್ತಿದ್ದರು. ಆದರೆ ಇದೀಗ ಕೇರಳದ ಮೂಲದ ಜೋಡಿ ಫಸ್ಟ್ ನೈಟ್ ಫೋಟೋ ಶೂಟ್ ಕೂಡ ಮಾಡಿದೆ.

ಕೇರಳದ ವಸ್ತ್ರಗಳು ಹಾಗೂ ಋಷಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಯುವತಿ ತನ್ನ ಫಸ್ಟ್ ನೈಟ್  ಫೋಟೋ ಶೂಟ್ ಹಂಚಿಕೊಂಡಿದ್ದಾಳೆ. ಕೈಯಲ್ಲಿ ಸಿಗರೇಟ್ ಮತ್ತು ಮದ್ಯದ ಬಾಟಲಿ ಹಿಡಿದ ಮೊದಲ ಫೋಟೋವನ್ನು ಆಕೆ ಹಂಚಿಕೊಂಡಿದ್ದಳು ಆ ಬಳಿಕ ಒಂದರ ಹಿಂದೊಂದರಂತೆ ಮಾದಕ ಫೋಟೋಗಳನ್ನು ಹರಿಯಬಿಟ್ಟಿದ್ದಾಳೆ.

ಮೊದಲ ರಾತ್ರಿ ಅರೆಬೆತ್ತಲಾಗಿ ಕುಳಿತಿರುವ ಚಿತ್ರವನ್ನೂ ಆಕೆ ಹಂಚಿಕೊಂಡಿದ್ದಾಳೆ. ಏನೇ ಆಗಲಿ, ಭಾರತೀಯರು ಕೂಡ ಲೈಂಗಿಕ ವಿಚಾರದಲ್ಲಿ ಮುಕ್ತವಾಗುತ್ತಿದ್ದಾರೆ ಎನ್ನುವುದು ಸದ್ಯ ಕಂಡು ಬರುತ್ತಿದೆ. ಭಾರತದ ಜನರಿಗೆ ವಿಪರೀಯ ನಾಚಿಕೆ ಇದ್ದರೂ ಕೂಡ ಜನಸಂಖ್ಯೆಯ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂಬ ಹಾಸ್ಯ ಅಥವಾ ವಾಸ್ತವಗಳ ನಡುವೆಯೇ, ಜನರು ಲೈಂಗಿಕತೆ ಮತ್ತು ಸಂಸ್ಕೃತಿ, ಶೀಲ- ಅಶ್ಲೀಲ ಎಂಬ ಸೀಮಿಯ ಮನಸ್ಥಿತಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿದೆ.

ಇನ್ನೂ ಋಷಿಯ ಗೆಟಪ್ ನಲ್ಲಿ ಮಾದಕವಾಗಿ ಫೋಟೋ ಶೂಟ್ ಮಾಡಿರುವುದಕ್ಕೆ ಕೆಲವು ಸಂಘಟಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಬಹಳಷ್ಟು ಋಷಿಗಳಿಗೆ ಕೂಡ ಪತ್ನಿಯರಿದ್ದ ಉಲ್ಲೇಖಗಳೂ ಇದೆ. ಇವುಗಳನ್ನು ಗಮನಿಸಿ ಜೋಡಿ ಇಂತಹ ಸಾಹಸಕ್ಕೆ ಕೈ ಹಾಕಿರಬಹುದು ಎನ್ನುವ ಅಭಿಪ್ರಾಯಗಳು ಈ ಫೋಟೋ ಶೂಟ್ ನ ಬಳಿಕ ಕೇಳಿ ಬಂದಿದೆ.

 

ಇತ್ತೀಚಿನ ಸುದ್ದಿ