ಕ್ರಿಸ್ಮಸ್ ಸಂದೇಶ: ಎಲ್ಲರ ಹೃದಯದಲ್ಲಿ ಶಾಂತಿ ಬೆಳಗಲಿ | ಸಿಸ್ಟರ್ ದೀಪ್ತಿ - Mahanayaka
8:07 PM Thursday 14 - November 2024

ಕ್ರಿಸ್ಮಸ್ ಸಂದೇಶ: ಎಲ್ಲರ ಹೃದಯದಲ್ಲಿ ಶಾಂತಿ ಬೆಳಗಲಿ | ಸಿಸ್ಟರ್ ದೀಪ್ತಿ

sr deepthi
25/12/2021

ಋಷಿಗಳು, ಮುನಿಗಳು ದೇವರನ್ನು ಹರಸಲು ತಪಸ್ಸುಗಳನ್ನು ಮಾಡಿದರು. ದೇವರು ಅವರ ಪ್ರಾರ್ಥನೆಗೆ ಪ್ರತ್ಯಕ್ಷರಾಗಿ ತಮಗೆ ಬೇಕಾದ ವರಗಳನ್ನು ದಯಪಾಲಿಸುವರು. ಆದರೆ, ಈ ಕ್ರಿಸ್ ಮಸ್ ದಿನದಲ್ಲಿ ಮಾನವರನ್ನು ಹುಡುಕಿ ಬರುವ ದೇವರನ್ನು ದೇವ ಪುತ್ರನನ್ನು ಗೋದಲಿಯಲ್ಲಿ ನಾವು ಕಾಣುತ್ತೇವೆ.

ಪ್ರಭುಯೇಸು ದೇವರ ಪುತ್ರ. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರು ಎಂದರೆ, ತಮ್ಮ ಏಕೈಕ ಪುತ್ರರನ್ನೇ ಅವರು ಧರಗೆರೆದರು ಎಂದು ಸಂತ ಯೊವಾನ್ನನ ಶುಭ ಸಂದೇಶದಲ್ಲಿ ಕಾಣುತ್ತೇವೆ. ಹೌದು…! ಆ ದಿನದ ಸ್ಮರಣೆಯೇ ಕ್ರಿಸ್ ಮಸ್. ಎಲ್ಲೆಡೆಯೂ ಸಂಭ್ರಮ ಸಡಗರ.

ಅಂದು ಬೆತ್ಲೆಹೆಮಿನಲ್ಲಿ ಗೋದಲಿಯಲ್ಲಿ ಯೇಸು ಜನಿಸಿದಾಗ ದೇವದೂತರು ಈ ಗೀತೆಯನ್ನು ಹಾಡಿದರು. “ಮಹೋನ್ನತದಲ್ಲಿ ದೇವರಿಗೆ ಮಹಿಮೆ. ಭೂಮಿಯಲ್ಲಿ ಸುಮನಸ್ಕರಿಗೆ ಶಾಂತಿ. ಆ ಶಾಂತಿಯು ಇಂದು ನಮ್ಮ ದೇಶದಲ್ಲಿ, ಪ್ರಪಂಚದಲ್ಲಿರುವ ಎಲ್ಲ ಮಾನವರಿಗೂ ಲಭಿಸಲಿ ಎಂದು ಪ್ರಾರ್ಥಿಸೋಣ. ಎಲ್ಲೆಡೆಯೂ ಅಶಾಂತಿ ಅಸಮಾಧಾನ ಇರುವಾಗ ದೇವರ ಶಾಂತಿ ಎಲ್ಲರ ಹೃದಯಗಳಲ್ಲೂ ಬೆಳಗಲಿ ಎಂದು ಈ ದಿನದಲ್ಲಿ ಹಾರೈಸುತ್ತೇನೆ.

ಯೇಸುವಿನ ಗೋದಲಿಯಲ್ಲಿ ಅನೇಕರನ್ನು ಕಾಣುತ್ತೇವೆ. ಯೇಸು, ಜೋಸೆಫಾ, ಮಾತೆ ಮರಿಯಳು, ದೇವದೂತರು, ಕುರುಬರು, ನಕ್ಷತ್ರ, 3 ಜ್ಞಾನಿಗಳು, ಕುರಿಗಳು, ದನಕರುಗಳು. ಹೌದು… ಎಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿ ಯೇಸುವನ್ನು ಆರಾಧಿಸಿದರು. ದೇವರ ಮುಂದೆ ನಿಲ್ಲುವಾಗ ನಾವೆಲ್ಲರೂ ಒಂದೆ. ಅಲ್ಲಿ ಜಾತಿ, ಮತ, ಧರ್ಮ, ವರ್ಣ, ವರ್ಗ ಎಂಬ ವ್ಯತ್ಯಾಸವಿಲ್ಲ. ಆದುದರಿಂದ ಈ ದಿನವೂ ನಮ್ಮೆಲ್ಲರನ್ನೂ ಒಂದಾಗಿಸಲು ಕರೆ ನೀಡಿದೆ. ನಾವೆಲ್ಲರೂ ದೇವರಲ್ಲಿ ಒಂದಾಗಿ ನಿಲ್ಲೋಣ, ಸಮಸ್ತ ಜನರಲ್ಲಿ ದೇವರ ಶಾಂತಿ ಸಮಾಧಾನ ಹೊರೆಯಲ್ಲಿ, ಎಲ್ಲರಿಗೂ ಕ್ರಿಸ್ ಮಸ್  ಶುಭ ದಿನ. ದೇವಪುತ್ರರ ಶಾಂತಿ ಸಮಾಧಾನ ಎಲ್ಲೆಡೆಗೂ ಹರಡಲಿ.




ಸಿಸ್ಟರ್ ದೀಪ್ತಿ

ಬೆಳ್ತಂಗಡಿ ಧರ್ಮಪ್ರಾಂತ್ಯ

ಇತ್ತೀಚಿನ ಸುದ್ದಿ