ಫೆಲ್ಯೂರ್ ಎಲ್ಲರ ಜೀವನದಲ್ಲೂ ಇದ್ದದ್ದೆ, ಎಲ್ಲರಿಗೂ ಒಂದು ದಿನ ಇದೆ: ಕೆಎಎಸ್ ಗೆ ಆಯ್ಕೆಯಾಗಿರುವ ರಾಹುಲ್ ಮೊಗಲಿ
ಬೆಂಗಳೂರು: ಫೆಲ್ಯೂರ್ ಎಲ್ಲರ ಜೀವನದಲ್ಲೂ ಇದ್ದದ್ದೆ. ಆದರೆ ನಿಮ್ಮನ್ನು ನೀವು ನಂಬಿ, ಎಲ್ಲರಿಗೂ ಒಂದು ದಿನ ಬಂದೇ ಬರುತ್ತದೆ. ಆದ್ರೆ, ಆ ದಿನಕ್ಕಾಗಿ ನಾವು ಕಾಯಬೇಕು ಎಂದು ಕೆಎಎಸ್ ಗೆ ಆಯ್ಕೆಯಾಗಿರುವ ರಾಹುಲ್ ಮೊಗಲಿ ಹೇಳಿದರು.
ಅಕ್ಕ ಐಎಎಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಬಂಟರ ಭವನದಲ್ಲಿ ಆಯೋಜಿಸಿದ್ದ 2017—18ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮೈಸೂರಿನಲ್ಲಿ ಇಂಜಿನಿಯರಿಂಗ್(ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್) ಮಾಡಿದೆ. 3ನೇ ವರ್ಷ ಇಂಜಿನಿಯರಿಂಗ್ ನಲ್ಲಿ ಒಂದು ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಆದರೆ ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ನಾನು ಆಫೀಸರ್ ಆಗ್ಬೇಕು. ಯಾವಾಗಲೂ ಒಂದು ಸ್ಟೇಟಸ್ ಇರಬೇಕು. ಎಲ್ಲರೂ ಗೌರವ ಕೊಡ್ಬೇಕು ಅಂತ ಮೊದಲಿಂದಲೂ ಆಸೆ ಇತ್ತು. ಇಂಜಿನಿಯರಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿದ್ರೂ, ಯಾಕೋ ತೃಪ್ತಿಯಾಗ್ಲಿಲ್ಲ. ಬೇರೆ ಏನೋ ಸಾಧನೆ ಮಾಡಬೇಕು ಅಂತ ಅನ್ನಿಸ್ತಿತ್ತು.
ಒಂದು ರಾತ್ರಿ ನಾನು ಜಾಬ್ ಗೆ ಹೋಗಬೇಕೇ ಎಂದು ಯೋಚನೆ ಮಾಡ್ತಿರುವ ವೇಳೆ, ನಾನು ಐಎಎಸ್ ಮಾಡ್ಲೇ ಬೇಕು ಅಂತ ಡಿಸೈಡ್ ಮಾಡಿ. ಡೆಲ್ಲಿಗೆ ಹೋದೆ. ಅಲ್ಲಿ ಕನ್ನಡ ಸಾಹಿತ್ಯಕ್ಕೆ ನಾನು ಡಾ.ಶಿವಕುಮಾರ್ ಅವರ ಬಳಿಯಲ್ಲಿ ಸೇರಿಕೊಂಡೆ. ಆ ಸಂದರ್ಭದಲ್ಲಿ ಶಿವಕುಮಾರ್ ಸರ್ ಅವರ ಮನೆಗೆ ಹೋಗ್ತಾ ಇದ್ವಿ, ನನಗೆ ಅವರು ಸಾಕಷ್ಟು ಸಹಾಯ ಮಾಡಿದ್ರು. ಮೊದಲ ಹಂತದಲ್ಲಿ ಕೇವಲ 3 ಅಂಕಗಳಿಂದ ನಾನು ಫೈನಲ್ ಲಿಸ್ಟ್ ನಿಂದ ಹೊರಗುಳಿದೆ. ಆದರೂ ಮತ್ತೆ ನನ್ನ ಶ್ರಮ ಬಿಡಲಿಲ್ಲ.
ಲಾಸ್ಟ್ ಟೈಮ್ ಕೆಎಎಸ್ ಗೆ ಇಂಟರ್ ವ್ಯೂ ಕೊಟ್ಟೆ. ಅಲ್ಲಿ ಕನ್ನಡ ಲಿಟ್ರೇಚರ್ ನಲ್ಲಿ ಕಡಿಮೆ ಅಂಕ ಬಂತು ನನ್ಗೆ. ಹಾಗಾಗಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆ ನಂತರ 2020ಯಲ್ಲಿ ಮತ್ತೆ 2ನೇ ಸಲ ಯುಪಿಎಸ್ ಸಿ ಇಂಟರ್ ವ್ಯೂಗೆ ಹೋದೆ. ಆದ್ರೆ, ಕೊವಿಡ್ ನಿಂದಾಗಿ ನಾನು ಮನೆಯಲ್ಲಿ ಲಾಕ್ ಆಗಿದ್ರಿಂದಾಗಿ ನನಗೆ ಪ್ರಿಪೇರ್ ಆಗಲು ಸಾಧ್ಯವಾಗಿರಲಿಲ್ಲ.
ನಾನು ಮತ್ತೆ ಸಿದ್ಧತೆ ಮುಂದುವರಿಸಿದೆ. ಡಾ.ಶಿವಕುಮಾರ್ ಸರ್ ಅವರು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನಿನ್ನಿಂದ ಸಾಧ್ಯವಾಗುತ್ತದೆ ಎಂದು ಹೇಳುತ್ತಿದ್ದರು. ಅವರ ಮುಖ ನೋಡಿದಾಗ, ಯಾರು ಕೂಡ ನಾನು ಫೈಲ್ಯೂರ್ ಆಗುತ್ತೇನೆ ಭಾವಿಸಲು ಸಾಧ್ಯವಿಲ್ಲ. ಯಾರು ಎಷ್ಟೇ ದೊಡ್ಡವರು ಬರಲಿ, ಎಷ್ಟೇ ಚಿಕ್ಕವರು ಬರಲಿ ನಿಮ್ಮನ್ನು ನೋಡಿದಾಗಲೇ ಅವರು ನಗುತ್ತಾರೆ. ಅದು ನನಗೆ ಮತ್ತೆ ಮತ್ತೆ ಪ್ರಿಪೇರ್ ಆಗಲು ಪ್ರೋತ್ಸಾಹ ನೀಡಿತು. ಇಂದಿನ ಯಶಸ್ಸು ಎಲ್ಲ ಸೇರಬೇಕಾಗಿರೋದು ಶಿವಕುಮಾರ್ ಸರ್ ಗೆ. ಅದನ್ನು ಹೇಳಲು ಇಷ್ಟ ಪಡ್ತೀನಿ ಅಂದರು.
ನಾನು ಗ್ರಾಮೀಣ ಭಾಗದವನು ಆದರೆ, ಶೈಕ್ಷಣಿಕವಾಗಿ ನಾನು ಟಾಪರ್. ಇವತ್ತು ನಾವು ಫೆಲ್ಯೂರ್ ಅಂತ ಅನ್ನಿಸ್ಬಹುದು. ಇದು ಎಲ್ಲರ ಜೀವನದಲ್ಲಿಯೂ ಆಗುವಂತಹದ್ದು ಆದ್ರೆ ನೀವು ನಿಮ್ಮನ್ನು ನಂಬಿ ಎಲ್ಲರಿಗೂ ಒಂದು ದಿನ ಬಂದೇ ಬರುತ್ತದೆ. ಆದ್ರೆ ನಾವು ಅದಕ್ಕೆ ಕಾಯ್ಬೇಕು ಅಂದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka