ಯೆಮೆನ್ ಬಂಡುಕೋರರ ದಾಳಿ: ಇಬ್ಬರು ಭಾರತೀಯರ ಸಾವು - Mahanayaka
3:34 AM Thursday 19 - September 2024

ಯೆಮೆನ್ ಬಂಡುಕೋರರ ದಾಳಿ: ಇಬ್ಬರು ಭಾರತೀಯರ ಸಾವು

yeman
24/01/2022

ಅಬುಧಾಬಿ: ಯೆಮೆನ್‌ ನ ಹೌ ತಿ ಬಂಡುಕೋರರು ರಾಜಧಾನಿ ಅಬುಧಾಬಿಯನ್ನು ಗುರಿಯಾಗಿರಿಸಿಕೊಂಡು ಹಾರಿಸಿದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಯೆಮೆನ್ ಬಂಡುಕೋರರ ದಾಳಿಗೆ ಯುಎಇ ಗಡಿಯಲ್ಲಿ ಇಬ್ಬರು ಭಾರತೀಯರು, ಓರ್ವ ಪಾಕಿಸ್ತಾನಿ ಪ್ರಜೆ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಈ ದಾಳಿಯ ಹೊಣೆಯನ್ನು ಯೆಮೆನ್ ಬಂಡುಕೋರರು ಹೊತ್ತಕೊಂಡ ಬಳಿಕ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

ಸೋಮವಾರ ಹೌ ತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಬಂಡುಕೋರರು ಗುರಿಯಾಗಿರಿಸಿಕೊಂಡು ಹಾರಿಸಿದ ಕ್ಷಿಪಣಿಯನ್ನು ಹೊಡೆದುರುಳಿಸಿದ್ದು, ಕ್ಷಿಪಣಿಯ ಅವಶೇಷಗಳು ಅಬುಧಾಬಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಳಕ್ಕೆ ಬಿದ್ದಿರುವುದಾಗಿ ವರದಿ ವಿವರಿಸಿದೆ.


Provided by

ಹೌತಿ ಬಂಡುಕೋರರ ಎಲ್ಲಾ ರೀತಿಯ ದಾಳಿಗಳನ್ನು ಎದುರಿಸಲು ಯುಎಇ ಸಿದ್ಧವಾಗಿದೆ ಎಂದು ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದು, ದೇಶವನ್ನು ಎಲ್ಲಾ ರೀತಿಯ ದಾಳಿಗಳಿಂದ ರಕ್ಷಿಸಲು ಸೇನೆ ಎಲ್ಲಾ ವಿಧದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಡಬ್ಲ್ಲುಎಎಂ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಯುಎಇ ಕುರಿತ ಅಧಿಕೃತ ಸುದ್ದಿಯನ್ನು ಮಾತ್ರ ಜನರು ನಂಬಬೇಕಾಗಿದ್ದು, ಊಹಾಪೋಹದ ವರದಿಗೆ ಕಿವಿಗೊಡಬಾರದೆಂದು ಸಚಿವಾಲಯ ಮನವಿ ಮಾಡಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಕ್ಕಳನ್ನು ಹೆದರಿಸಲು ಗುಂಡು ಹಾರಿಸಿದ ಸಚಿವರ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಮತ್ತೋರ್ವ ಬಿಜೆಪಿ ಶಾಸಕ ರಾಜೀನಾಮೆ; ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಬಲವಂತದಿಂದ ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್ ಮಾಡಿದ ಬಾವ

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಬಾಲಕ

ಗುರಿ ತಪ್ಪಿದ ಗುಂಡು: 8 ವರ್ಷದ ಬಾಲಕಿ ಬಲಿ

 

ಇತ್ತೀಚಿನ ಸುದ್ದಿ