ಯಮನ್ ನಲ್ಲಿ ಮಹಾ ಶಿಕ್ಷೆ: ಈದ್ ನಂತರ ಕೇರಳ ನರ್ಸ್ ಗೆ ಗಲ್ಲು?

ಯಮನಿನಲ್ಲಿ ಗಲ್ಲು ಶಿಕ್ಷೆಯ ಭೀತಿಯನ್ನು ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷ ಪ್ರಿಯ ಅವರನ್ನು ಈದ್ ನ ನಂತರ ಗಲ್ಲಿಗೆ ಏರಿಸಲಾಗುವುದು ಎಂದು ತಿಳಿದುಬಂದಿದೆ. ಈ ಬಗ್ಗೆ ವಕೀಲರು ನಿಮಿಷಪ್ರಿಯ ಅವರಿಗೆ ಮಾಹಿತಿ ನೀಡಿದ್ದಾರೆ. ತಲಾಲ್ ಅಬ್ದುಲ್ ಮಹದಿ ಎಂಬ ಯಮನ್ ನಾಗರೀಕರನ್ನು ಹತ್ಯೆ ಗೈದ ಆರೋಪ ನಿಮಿಷ ಪ್ರಿಯ ಅವರ ಮೇಲಿದೆ.
ಕೇರಳದ ಈ ನಿಮಿಷ ಪ್ರಿಯ 2012ರಲ್ಲಿ ನರ್ಸ್ ಕೆಲಸಕ್ಕಾಗಿ ಯಮನ್ಗೆ ಹೋದರು. ಇವರ ಜೊತೆಗೆ ಇವರ ಪತಿಯೂ ಹೋಗಿದ್ದರು. ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು . ಈ ನಿಮಿಷ ಪ್ರಿಯ ಕ್ಲಿನಿಕಲ್ಲಿ ನರ್ಸ್ ಆಗಿ ಸೇರಿಕೊಂಡರು. ಇದರ ನಡುವೆ ಯಮನ್ ನಾಗರಿಕರಾದ ತಲಾಲ್ ಅಬ್ದುಲ್ ಮಹದಿ ಎಂಬ ವರ ಪರಿಚಯವಾಗಿದ್ದು ಅವರ ಜೊತೆಗೂಡಿ ಕ್ಲಿನಿಕ್ ಅನ್ನು ತೆರೆದರು. ಯಮನ್ ನಾಗರಿಕರ ಹೊಣೆಗಾರಿಕೆ ಇಲ್ಲದೆ ಅಲ್ಲಿ ಕ್ಲಿನಿಕ್ ತೆರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅವರು ಈ ಏರ್ಪಾಡು ಮಾಡಿದ್ದರು .
ಈ ಕ್ಲಿನಿಕ್ ಆರಂಭಿಸುವುದಕ್ಕಾಗಿ ತಮ್ಮಲ್ಲಿರುವ ಎಲ್ಲಾ ಹಣವನ್ನು ಈ ನಿಮಿಷ ಮತ್ತು ಅವರ ಗಂಡ ಈ ಯಮನ್ ನಾಗರಿಕರಿಗೆ ನೀಡಿದರು. ಇನ್ನಷ್ಟು ಹಣ ಬೇಕಾಗಿರುವುದರಿಂದ ಅದನ್ನು ಸಂಗ್ರಹಿಸುವುದಕ್ಕಾಗಿ ಈ ನಿಮಿಷ ಮತ್ತು ಅವರ ಪತಿ ಕೇರಳಕ್ಕೆ ಮರಳಿದರು. ಆದರೆ ಆ ಬಳಿಕ ನಿಮಿಷ ಮಾತ್ರ ಯಮನ್ಗೆ ಮರಳಿದರು. ತಮ್ಮ ಬಿಸಿನೆಸ್ ಚೆನ್ನಾಗಿ ನಡೆಯಬಹುದು ಮತ್ತು ಯಮನ್ ನಾಗರಿಕ ತಮಗೆ ಮೋಸ ಮಾಡಲಾರ ಎಂದವರು ಭಾವಿಸಿದ್ದರು. ನಿಮಿಷ ಹೋದ ಬಳಿಕ ಯಮನಿಗೆ ಹೋಗಲು ಅವರ ಪತಿ ತೀರ್ಮಾನಿಸಿದ್ದರು. ಆದರೆ ಸೌದಿ ಯಮನ್ ಯುದ್ಧದ ಕಾರಣದಿಂದಾಗಿ ಅವರು ಹೋಗುವುದು ವಿಳಂಬವಾಯಿತು.
ಈ ನಡುವೆ ಈ ಯಮನ್ ನಾಗರಿಕ ನಿಮಿಷಪ್ರಿಯ ಅವರಿಗೆ ಮೋಸ ಮಾಡಿದರು ಎಂದು ಹೇಳಲಾಗುತ್ತದೆ. ಅವರಿಗೆ ಬಂದ ವರಮಾನವನ್ನೆಲ್ಲ ಅವರೇ ಪಡೆದುಕೊಂಡರು. ನಕಲಿ ವಿವಾಹ ಸರ್ಟಿಫಿಕೇಟ್ ಅನ್ನು ಮಾಡಿಕೊಂಡರು. ಇವರ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡರು. ಯಮನ ಅಧಿಕಾರಿಗಳಿಗೆ ನಿಮಿಷಪ್ರಿಯ ದೂರು ನೀಡಿದಾಗ ಅವರ ಮೇಲೆ ದೌರ್ಜನ್ಯ ನಡೆಸಿದರು. ತನ್ನ ಜೀವಕ್ಕೆ ಅಪಾಯವಿದೆ ಎಂದು ಅರಿವಾದ ಬಳಿಕ ಮಹದಿಯನ್ನು ಕೊಲ್ಲಲು ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ. ತಲಾಲ್ ಅವರಿಂದ ಮಾನಸಿಕ ಮತ್ತು ದೈಹಿಕ ಪೀಡನೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವರನ್ನು ನಿಮಿಷಪ್ರಿಯ ಕೊಂದಿದ್ದಾರೆ ಎಂದು ಹೇಳಲಾಗಿದೆ.
2017ರಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ನಿಮಿಷಪ್ರಿಯ ಅವರಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj