ಏನಿದು ಪಿಂಕ್ ವಾಟ್ಸಾಪ್? | ಲಿಂಕ್ ಒತ್ತಿದರೆ ಏನಾಗುತ್ತೆ ಗೊತ್ತಾ? - Mahanayaka
5:20 PM Wednesday 11 - December 2024

ಏನಿದು ಪಿಂಕ್ ವಾಟ್ಸಾಪ್? | ಲಿಂಕ್ ಒತ್ತಿದರೆ ಏನಾಗುತ್ತೆ ಗೊತ್ತಾ?

pink whatsapp
17/04/2021

ಬೆಂಗಳೂರು: ಕಳೆದ ಹಲವು ದಿನಗಳಿಂದಲೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಪಿಂಕ್ ವಾಟ್ಸಪ್ ಎಂಬ ಲಿಂಕ್ ವೊಂದು ಹರಿದಾಡುತ್ತಿದೆ. ಈ ವಾಟ್ಸಾಪ್ ಹೊಸ ವರ್ಷನ್ ಆಗಿದೆ ಎಂದು ಬರೆಯಲಾದ ಲಿಂಕೊಂದು ವೈರಲ್ ಆಗಿದೆ.

 

ಅಷ್ಟಕ್ಕೂ ಪಿಂಕ್ ವಾಟ್ಸಾಪ್ ಎನ್ನುವ ಹೊಸ ವರ್ಶನ್ ಬಂದಿದೆಯೇ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಇಲ್ಲ. ಸದ್ಯ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಲಿಂಕ್, ವೈರಸ್ ಲಿಂಕ್ ಆಗಿದೆ. ನೀವು ಒಂದು ಬಾರಿ ಈ ಲಿಂಕ್ ನ್ನು ಒತ್ತಿದರೆ, ಏಕಕಾಲದಲ್ಲಿ ಸಾವಿರಾರು ಮಂದಿಗೆ ಈ ಲಿಂಕ್ ಫಾರ್ವರ್ಡ್ ಆಗುತ್ತದೆ.

 

ಯಾರೋ ಕಿಡಿಗೇಡಿಗಳು ಇಂತಹದ್ದೊಂದು ಲಿಂಕ್ ಸೃಷ್ಟಿಸಿ ವೈರಲ್ ಮಾಡಿದ್ದಾರೆ. ಈ ಲಿಂಕ್ ನೋಡಿ ಅನೇಕ ಜನರು ಮೋಸ ಹೋಗಿದ್ದು, ಲಿಂಕ್ ನ್ನು ಕ್ಲಿಕ್ ಮಾಡಿ, ಸಾವಿರಾರು ಜನರಿಗೆ ತಮಗೆ ಗೊತ್ತಿಲ್ಲದೆಯೇ ಈ ಮೆಸೆಜ್ ಪಾರ್ವರ್ಡ್ ಮಾಡಿದ್ದಾರೆ. ಸಾರ್ವಜನಿಕರು ಯಾರು ಕೂಡ ಈ ಲಿಂಕ್ ಕ್ಲಿಕ್ ಮಾಡಬೇಡಿ. ಈ ಲಿಂಕ್ ನ್ನು ಸೃಷ್ಟಿಸಿರುವುದರ ಹಿಂದಿನ ಉದ್ದೇಶ ಏನು ಎನ್ನುವುದು ಕೂಡ ತಿಳಿದು ಬಂದಿಲ್ಲ.

ಇತ್ತೀಚಿನ ಸುದ್ದಿ