ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ | ಎಣ್ಣೆ ಹೊಡೆದು ಸತ್ತವರಿಗೆ ವಿಮಾ ಹಣ ಇಲ್ಲ! - Mahanayaka
6:13 AM Thursday 12 - December 2024

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ | ಎಣ್ಣೆ ಹೊಡೆದು ಸತ್ತವರಿಗೆ ವಿಮಾ ಹಣ ಇಲ್ಲ!

vima
23/03/2021

ನವದೆಹಲಿ:  ಮದ್ಯ ಸೇವನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ವಿಮೆ ಹಣ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು,  ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಅತೀಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಸತ್ತ ವ್ಯಕ್ತಿಯೋರ್ವನ ಕುಟುಂಬಸ್ಥರು ತಮಗೆ ವಿಮೆ ಹಣ ನೀಡಲು ವಿಮಾ ಸಂಸ್ಥೆಗೆ ಆದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪಘಾತದಿಂದ ಮೃತಪಟ್ಟರೆ ಅಥವಾ ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡರೆ ಆತನ ಕುಟುಂಬಸ್ಥರು ವಿಮೆ ಹಣ ಪಡೆದುಕೊಳ್ಳಬಹುದು. ಆದರೆ ಕುಡಿದು ಸತ್ತರೆ ವಿಮೆ ಹಣಕ್ಕೆ ಅವರು ಅರ್ಹರಲ್ಲ ಎಂದು ಕೋರ್ಟ್ ಹೇಳಿದೆ.

ಶಿಮ್ಲಾ ಜಿಲ್ಲೆಯ ಚೌಪಾಲ್ ನ ರಾಜ್ಯ ಅರಣ್ಯ ನಿಗಮದಲ್ಲಿ 1997ರ ಎಪ್ರಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ ವಿಪರೀತವಾಗಿ ಕುಡಿದು ಸಾವನ್ನಪ್ಪಿದ್ದು, ಇದು ವೈದ್ಯಕೀಯ ವರದಿಯಲ್ಲಿ ಕೂಡ ಉಲ್ಲೇಖಿಸಲಾಗಿತ್ತು.  ಆದರೆ ಕುಟುಂಬಸ್ಥರು ವಿಮೆ ಹಣಕ್ಕಾಗಿ  ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಅಲ್ಲಿ ಕೂಡ ವಿಮೆ ಹಣ ನೀಡಲಾಗುವುದಿಲ್ಲ ಎಂದು ಆದೇಶಿಸಲಾಗಿತ್ತು. ಇದೀಗ ಈ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಈ ಸಾವು ಆಕಸ್ಮಿಕವಲ್ಲ. ಕುಡಿದು ಸತ್ತ ಕಾರಣದಿಂದ ಈ ಪ್ರಾಣ ಹಾನಿ ಸರಿದೂಗಿಸಲು ಸಂಸ್ಥೆಗೆ ಯಾವುದೇ ಶಾಸನಬದ್ಧ ಬಾಧ್ಯತೆ ಇಲ್ಲ ಎಂದು ಕೋರ್ಟ್ ಹೇಳಿದೆ.

ಇತ್ತೀಚಿನ ಸುದ್ದಿ