ಕೊರೊನಾ ವಾಸಿಯಾಗಲು ಸೀಮೆ ಎಣ್ಣೆ ಕುಡಿದ ವ್ಯಕ್ತಿ ದಾರುಣ ಸಾವು - Mahanayaka

ಕೊರೊನಾ ವಾಸಿಯಾಗಲು ಸೀಮೆ ಎಣ್ಣೆ ಕುಡಿದ ವ್ಯಕ್ತಿ ದಾರುಣ ಸಾವು

kerosene oil
18/05/2021

ಭೋಪಾಲ್: ಕೊರೊನಾ ಬಂದ ಮೇಲೆ ರೋಗಿಗಳಿಂದ ವೈದ್ಯರಾಗುತ್ತಿರುವವರೇ ಹೆಚ್ಚಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಅದು ಮಾಡಿ ಇದು ಮಾಡಿ ಎಂದು ಇಲ್ಲದ  ಅನಾಹುತಗಳನ್ನು ಸೃಷ್ಟಿಸುತ್ತಿದ್ದಾರೆ. ಇಲ್ಲೊಬ್ಬ ಕೊರೊನಾವನ್ನು ಸಾಯಿಸಲು ಸೀಮೆ ಎಣ್ಣೆ ಕುಡಿದ ಘಟನೆ ವರದಿಯಾಗಿದೆ.


Provided by

30 ವರ್ಷ ವಯಸ್ಸಿನ ಮಹೇಂದ್ರ ಎಂಬ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದವು. ತನಗೆ ಕೊರೊನಾ ಬಂದಿರಬಹುದು ಎಂದು ಅವರು ಅನುಮಾನಕ್ಕೊಳಗಾಗಿದ್ದಾರೆ. ಈ ವೇಳೆ ಯಾರೂ ಅವರಿಗೆ ಔಷಧಿ ಹೇಳಿದ್ದು, ಸೀಮೆ ಎಣ್ಣೆ ಕುಡಿದರೆ, ಕೊರೊನಾ ವಾಸಿಯಾಗುತ್ತದೆ ಎಂದಿದ್ದಾರೆ. ಅವರ ಮಾತು ನಂಬಿ ಸೀಮೆ ಎಣ್ಣೆ ಸೇವಿಸಿದ ಮಹೇಂದ್ರ ಅವರ ಆರೋಗ್ಯ ಕೆಲವೇ  ಕ್ಷಣಗಳಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ತಕ್ಷಣವೇ ಮಹೇಂದ್ರ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ.

ಆಸ್ಪತ್ರೆಗೆ ಸೇರಿದ ಮಹೇಂದ್ರ ನಾಲ್ಕು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  ಕೊರೊನಾಕ್ಕೆ ಕಂಡಕಂಡವರು ಹೇಳಿದ ಮದ್ದುಗಳನ್ನು ಮಾಡಲು ಹೋಗದಿರಿ. ಕರ್ನಾಟಕದಲ್ಲಿಯೂ ಒಬ್ಬರು ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಲು ಹೇಳಿದ್ದರು. ಇದರಿಂದ ಸಾಕಷ್ಟು ಜನರಿಗೆ ಸಮಸ್ಯೆಯಾಗಿತ್ತು. ಮದ್ದು ಹೇಳಿದವರು ಏನೇ ಸಮರ್ಥಿಸಿಕೊಳ್ಳಬಹುದು, ಆದರೆ ಹೋದ ಜೀವ ಮತ್ತೆ ಬರಲು ಸಾಧ್ಯವಿಲ್ಲ.


Provided by

ಇನ್ನೊಂದು ವಿಪರ್ಯಾಸ ಏನೆಂದರೆ, ಸೀಮೆ ಎಣ್ಣೆ ಕುಡಿದಿದ್ದ ಮಹೇಂದ್ರಗೆ ಕೊರೊನಾ ರೋಗವೇ ಇರಲಿಲ್ಲ. ಆದರೆ ಕಂಡವರ ಮಾತುಕೇಳಿ ತನ್ನ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿಯೇ  ಅವರು ಸಾವನ್ನಪ್ಪಿದ್ದಾರೆ.

ಇತ್ತೀಚಿನ ಸುದ್ದಿ