"ಎಂತಹ ಜನ ಸರ್ ಇವರೆಲ್ಲ, ಸಾಯ್ತಾ ಇರೋ ಹುಡುಗನ ವಿಡಿಯೋ ಮಾಡ್ಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ತಿದ್ದಾರೆ" | ಹರ್ಷ ಸಹೋದರಿ ಬೇಸರ - Mahanayaka
7:16 AM Thursday 12 - December 2024

“ಎಂತಹ ಜನ ಸರ್ ಇವರೆಲ್ಲ, ಸಾಯ್ತಾ ಇರೋ ಹುಡುಗನ ವಿಡಿಯೋ ಮಾಡ್ಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ತಿದ್ದಾರೆ” | ಹರ್ಷ ಸಹೋದರಿ ಬೇಸರ

araga jnanendra
21/02/2022

ಶಿವಮೊಗ್ಗ: “ಸಾಯ್ತಾ ಇರೋ ಹುಡುಗನ್ನು ವಿಡಿಯೋ ಮಾಡ್ಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿಕೊಳ್ತಿದ್ದಾರೆ, ಎಂತಹ ಜನಗಳು ಸರ್ ಇವರೆಲ್ಲ” ಎಂದು ದುಷ್ಕರ್ಮಿಗಳಿಂದ ಇಂದು ಬರ್ಬರವಾಗಿ ಹತ್ಯೆಗೀಡಾಗಿರುವ ಹರ್ಷ ಅವರ ಸಹೋದರಿ ಬೇಸರ ವ್ಯಕ್ತಪಡಿಸಿದರು.

ಹರ್ಷ ಹತ್ಯೆ ಸಂಬಂಧ ಕುಟುಂಬಸ್ಥರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಾಂತ್ವನ ಹೇಳಲು ಹೋಗಿದ್ದ ವೇಳೆಯಲ್ಲಿ ನೋವು ತೋಡಿಕೊಂಡ ಅವರು, ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಇವರು ಎಂತಹ   ಕ್ರೂರಿಗಳು ಸರ್,  ಎಂತಹ ಜನಗಳು ಸರ್ ಇವರೆಲ್ಲ, ಜೀವಕ್ಕೆ ಬೆಲೆನೇ ಇಲ್ವಾ? ಶಿಕ್ಷೆ ಆಗ್ಲೇ ಬೇಕು ಸರ್, ನನ್ನ ತಮ್ಮನಂತೂ ನಿಮ್ಮಿಂದ ಕೊಡಕ್ಕಾಗಲ್ಲ, ದಯವಿಟ್ಟು, ನ್ಯಾಯಕೊಡಿಸಿ ಅಂತ ಕೇಳ್ತಿದ್ದೇವೆ ಎಂದು ಅವರು ಸಚಿವರನ್ನು ಒತ್ತಾಯಿಸಿದರು.

ಇವರನ್ನು ಈ ರೀತಿ ಬಿಟ್ರೆ ಇನ್ನೂ ನೂರು ಜನರನ್ನು ಇದೇ ರೀತಿ ಮಾಡ್ತಾರೆ… ಇವರೆಲ್ಲ ನನ್ನ ತಮ್ಮಂದಿರು, ಇವರಿಗೆಲ್ಲ ನಾಳೆ ಇಂತಹ ಪರಿಸ್ಥಿತಿ ಬರ್ಬಾರ್ದು.. ಎಂದು ಅವರು ಇದೇ ವೇಳೆ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.

ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ ಎಂದು ಇದೇ ವೇಳೆ ಅರಗ ಜ್ಞಾನೇಂದ್ರ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರತಿ ಹತ್ಯೆಗೆ ಸಿದ್ದರಾಮಯ್ಯಗೆ ಬೈಯ್ಯುತ್ತಿದ್ದೆವು, ಈಗ ನಾಚಿಕೆಯಾಗುತ್ತಿದೆ | ಪ್ರತಾಪ್ ಸಿಂಹ ಹೇಳಿದ್ದೇನು?

ಸಂಬಂಧಿಕರ ಮುಂದೆಯೇ ಸಿಪಿಎಂ ಕಾರ್ಯಕರ್ತನ ಭೀಕರ ಕೊಲೆ

ಊಟ ಬಡಿಸುವುದು ತಡವಾಗಿದೆ ಎಂದು ಮದುವೆ ನಿರಾಕರಿಸಿ ವರ ಮಂಟಪದಿಂದ ಎಸ್ಕೇಪ್

ಮೃತ ಹರ್ಷನ ವಿರುದ್ದ ನಾಲ್ಕು ಪ್ರಕರಣ ದಾಖಲಾಗಿದ್ದವು

ಹರ್ಷ ಶವಯಾತ್ರೆಯ ವೇಳೆ ಅಹಿತಕರ ಘಟನೆ: ವಾಹನಗಳಿಗೆ ಬೆಂಕಿ

ಇತ್ತೀಚಿನ ಸುದ್ದಿ