2023ರಲ್ಲಿ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ: ಹೆಚ್.ಡಿ.ದೇವೇಗೌಡ ಗುಡುಗು
ಬೆಂಗಳೂರು: 2023ಕ್ಕೆ ಜೆಡಿಎಸ್ ಪಕ್ಷವೇ ಇರಲ್ಲ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ. ಆದರೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುವ ಸ್ಥಿತಿ ಬರಲಿದೆ ಎಂದು ಕಾಂಗ್ರೆಸ್, ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಗುಡುಗಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷವೇ ಇಲ್ಲದಾಗುತ್ತದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಆದರೆ, 2023ಕ್ಕೆ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬಂದು ನಿಲ್ಲುವ ಸಂದರ್ಭ ಬರುತ್ತದೆ ಎಂದು ಅವರು ಭವಿಷ್ಯ ನುಡಿದರು.
ಜೆಡಿಎಸ್ ಎಂಬುದು ಒಂದು ರಾಜಕೀಯ ಪಕ್ಷವೇ ಅಲ್ಲ, ನಾವು 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಆದರೆ ಇಂದು ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ? ದೆಹಲಿಯಲ್ಲಿ ಒಂದು ಸ್ಥಾನ ಇದೆ, ಓಡಿಶಾದಲ್ಲಿ ಒಂದು ಸ್ಥಾನವಿದೆ. ಇನ್ನು ತಮಿಳುನಾಡಿನಲ್ಲಿ ಏನಾಯ್ತು? ಕಾಂಗ್ರೆಸ್ ಎಲ್ಲಿಗೆ ಹೋಯ್ತು? ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ, ಜೆಡಿಎಸ್ ಮನೆ ಬಾಗಿಲಿಗೆ ಬರಲಿದೆ ಎಂದು ದೇವೇಗೌಡರು ತಿರುಗೇಟು ನೀಡಿದರು.
ನನ್ನ ರಕ್ತದ ಕಣಕಣ ಕೂಡ ಜೆಡಿಎಸ್ ಇದೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇನೆ. ನನಗೆ ಮಂಡಿ ನೋವು ಮಾತ್ರ ಇದೆ. ಅಂದಿನ ಸೋಲು ಮುಂದಿನ ಗೆಲುವಿಗೆ ನಮಗೆ ಹೆದ್ದಾರಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ…
ಭೀಕರ ಅಪಘಾತ: ಬಸ್, ಟಾಟಾ ಏಸ್ ವಾಹನದ ನಡುವೆ ಸಿಲುಕಿದ ತಂದೆ, ಮಗಳು ಸಾವು
ಮತ್ತೊಂದು ಫ್ಲೈಓವರ್ ನಿರ್ಮಾಣ ಮಾಡುವ ಸಿಹಿ ಸುದ್ದಿ ನೀಡಿದ ನಳಿನ್ ಕುಮಾರ್ ಕಟೀಲ್
ಮದುವೆಯಾಗುವುದಿಲ್ಲ ಎಂದ ಯುವತಿ! | ಗ್ರಾಮಕ್ಕೆ ಓಡಿ ಬಂದ ಅಧಿಕಾರಿಗಳ ದಂಡು
ಟ್ರಾಫಿಕ್ ಸಿಗ್ನಲ್ ನಲ್ಲಿ ಡಾನ್ಸ್ ಮಾಡಿ ಸಂಕಷ್ಟಕ್ಕೀಡಾದ ಯುವತಿ!
ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!
ದೇವಸ್ಥಾನ ತೆರವು ವಿಚಾರ: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ
ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಸಿದ್ದರಾಮಯ್ಯ ಮೇಲೆ ಮುಗಿಬಿದ್ದ ಬಿಜೆಪಿ ಸದಸ್ಯರು!