ಏರೆಗ್ಲಾ ಪನೋಡ್ಚಿ…! | “ನಳಿನ್ ಕುಮಾರ್ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಯಾರೆಂದು ತಿಳಿಯಿತು” - Mahanayaka
12:36 PM Wednesday 26 - November 2025

ಏರೆಗ್ಲಾ ಪನೋಡ್ಚಿ…! | “ನಳಿನ್ ಕುಮಾರ್ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಯಾರೆಂದು ತಿಳಿಯಿತು”

naleen kumar kateel
26/07/2021

ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆಗೂ ಮೊದಲೇ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು. ಏರೆಗ್ಲಾ ಪನೋಡ್ಚಿ, ಮೂಜಿ ಪುದರ್ ಉಂಡು(ಯಾರಿಗೂ ಹೇಳ್ಬೇಡಿ, ಮೂರು ಹೆಸರಿದೆ) ಎಂಬ ಅವರ ಡೈಲಾಗ್ ಕೂಡ ಫೇಮಸ್ ಆಗಿತ್ತು. ಆದರೆ, ಈ ಆಡಿಯೋ ನನ್ನದಲ್ಲ, ಯಾರೂ ಮಿಮಿಕ್ರಿ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು.

ನಳಿನ್ ಕುಮಾರ್ ಕಟೀಲ್ ಅವರ ಆಡಿಯೋವನ್ನು ರಾಜ್ಯ ಕಾಂಗ್ರೆಸ್, ಯಡಿಯೂರಪ್ಪನವರ ರಾಜೀನಾಮೆ ಸಂದರ್ಭದಲ್ಲಿ ಮತ್ತೆ ಎಳೆದು ತಂದಿದ್ದು, “ಮೀರ್ ಸಾದಿಲ್ ಕಟೀಲ್ ರ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಸ್ವತಃ ನಳಿನ್ ಕುಮಾರ್ ಕಟೀಲ್ ಅವರೇ ಎನ್ನುವುದು ಸಾಬೀತಾಯ್ತು” ಎಂದು ಟ್ವೀಟ್ ಮಾಡಿದೆ.

ಯಡಿಯೂರಪ್ಪನವರು ಬಿಜೆಪಿಯ ಆತ್ಮ ಎನ್ನುತ್ತಲೇ ಆತ್ಮ ವಂಚನೆ ಮಾಡಿದ ಕಟೀಲ್ ಇಂದು ಬಲು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿರಬಹುದು ಅದೇನೇ ಆದರೂ ಹಿರಿಯ ನಾಯಕನಿಗೆ ಕಣ್ಣೀರು ಹಾಕುವಷ್ಟ ಕಷ್ಟ ನೀಡಬಾರದಿತ್ತು ಎಂದು ಕಾಂಗ್ರೆಸ್ ಟೀಕಿಸಿ ಟ್ವೀಟ್ ಮಾಡಿದೆ.

ಇನ್ನಷ್ಟು ಸುದ್ದಿಗಳು…

ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್

ಯಡಿಯೂರಪ್ಪ ವಿರೋಧಿ ಬಣದಿಂದ ಬ್ರಾಹ್ಮಣ ಸಿಎಂಗಾಗಿ ಒತ್ತಡ?

ಯಾರಾಗಲಿದ್ದಾರೆ ಮುಂದಿನ ಸಿಎಂ? | ಅಮಿತ್ ಶಾ ಆತ್ಮೀಯರಾಗಿರುವ ಇವರಿಗೇ ಪಟ್ಟ ಕಟ್ಟುತ್ತಾರಾ?

ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

ರಾಜ್ಯ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದ ಯಡಿಯೂರಪ್ಪ | ಸಿಎಂ ಸ್ಥಾನಕ್ಕೆ ರಾಜೀನಾಮೆಯ ಬಳಿಕ ಮುಂದಿನ ಆಯ್ಕೆ ಏನು?

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ಇತ್ತೀಚಿನ ಸುದ್ದಿ