ಕ್ರಿಸ್ಮಸ್ ಹಬ್ಬದ ಶುಭಾಶಯಗಳು:  ಏಸು ಕ್ರಿಸ್ತರು ಬೋಧಿಸಿದ ಅದ್ಭುತ ವಿಚಾರಧಾರೆಗಳು ಇಲ್ಲಿದೆ - Mahanayaka
3:19 AM Wednesday 11 - December 2024

ಕ್ರಿಸ್ಮಸ್ ಹಬ್ಬದ ಶುಭಾಶಯಗಳು:  ಏಸು ಕ್ರಿಸ್ತರು ಬೋಧಿಸಿದ ಅದ್ಭುತ ವಿಚಾರಧಾರೆಗಳು ಇಲ್ಲಿದೆ

25/12/2020

ಇಂದು ಇಡೀ ಜಗತ್ತು ಕೊರೊನಾ ಕಾಲದ ನಡುವೆಯೇ ಕ್ರಿಸ್ಮಸ್ ಆಚರಣೆ ನಡೆಸುತ್ತಿದೆ.  ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಏಸು ಕ್ರಿಸ್ತರು ಹುಟ್ಟಿದ ಈ ದಿನ. ಈ ದಿನದಂದ ಏಸು ಕ್ರಿಸ್ತರ ಪ್ರಮುಖ ಬೋಧನೆಗಳನ್ನು ತಿಳಿಯೋಣ.

ಸಾಮಾನ್ಯವಾಗಿ ಎಲ್ಲರೂ ಸಿಕ್ಕಿ ಸಿಕ್ಕಿದ್ದಕ್ಕೆಲ್ಲ ಆಣೆ ಮಾಡಲು ಮುಂದಾಗುತ್ತಾರೆ. ಆದರೆ ಏಸು ಕ್ರಿಸ್ತರು ಹೇಳುತ್ತಾರೆ. ನೀನು  ಆಣೆಯನ್ನು ಇಡಬೇಡ. ಸುಳ್ಳಾಣೆಯನ್ನುಂತು ಇಡಲೇ ಬೇಡ. ನಿನ್ನ ಮಾತು ಎಂದಿಗೂ ಹೌದು ಎನ್ನುವುದಾಗಿದ್ದರೆ, [www.mahanayaka.in] ಹೌದಾಗಿರಲಿ, ಅಲ್ಲ ಎನ್ನುವುದಾಗಿದ್ದರೆ, ಅಲ್ಲ ಎನ್ನುವುದಾಗಿರಲಿ ಎಂದು ಹೇಳುತ್ತಾರೆ. ಅಂದರೆ, ನಮ್ಮ ಮಾತಿನಲ್ಲಿ ನಮಗೆ ದೃಢತೆ ಇರಲಿ. ನಾವು ಎಂದಿಗೂ ಚಂಚಲಿತರಾಗಿ ಮಾತನಾಡಬಾರದು. ಯಾವುದೇ ಒಂದು ವಿಚಾರದ ಬಗ್ಗೆ ದ್ವಂದ್ವ ತಳೆಯ ಬಾರದು. ಈ ರೀತಿಯ ದ್ವಂದ್ವಗಳು ಸೈತಾನನಿಂದ ಬಂದಿರುವುದು.  ಸೈತಾನ ಎಂದರೆ ಇಲ್ಲಿ ಕೆಟ್ಟದ್ದು ಎಂದು ಅರ್ಥೈಸಿಕೊಳ್ಳಬಹುದು.

ಇನ್ನೂ ಅಹಿಂಸೆಯನ್ನು ಪ್ರತಿಪಾದಿಸಿರುವ ಏಸು ಕ್ರಿಸ್ತರು, ಒಂದು ಕಣ್ಣನ್ನು ಒಬ್ಬ ತೆಗೆದರೆ, ಅವನ ಕಣ್ಣನ್ನು ತೆಗೆಯಬೇಕು, ಒಂದು ಹಲ್ಲನ್ನು ಒಬ್ಬ ತೆಗೆದರೆ ಅವನ ಹಲ್ಲನ್ನು ತೆಗೆಯ ಬೇಕು [www.mahanayaka.in] ಎನ್ನುವುದನ್ನು ಎಲ್ಲರೂ ಹೇಳುತ್ತಾರೆ. ಆದರೆ, ನಾನು ಹಾಗೆ ಹೇಳುವುದಿಲ್ಲ.  ಕೆಡುಕನ್ನು ಕೆಡುಕಿನಿಂದ ಎದುರಿಸಬೇಡಿ. ಒಬ್ಬ ನಿನ್ನ ಬಲ ಕೆನ್ನೆಗೆ ಹೊಡೆದರೆ, ಅವನಿಗೆ ನಿನ್ನ ಎಡ ಕೆನ್ನೆ ತೋರಿಸು ಎಂದು ಹೇಳುತ್ತಾರೆ. ಈ ಮಾತನ್ನು ಗಾಂಧೀಜಿ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ಈ ಮಾತನ್ನು ಏಸು ಕ್ರಿಸ್ತರು ಹೇಳಿದ್ದರು.

ಇನ್ನೂ ಬೇರೆಯವರಿಗೆ ಸಹಾಯ ಮಾಡುವ ಬಗ್ಗೆ ಕ್ರೈಸ್ತರಿಗೆ ಏಸು ಕ್ರಿಸ್ತರು ಹೀಗೆ ಬೋಧಿಸುತ್ತಾರೆ,   ಒಬ್ಬ ನಿನ್ನನ್ನು ಒಂದು ಮೈಲು ದೂರ ಬಾ ಎಂದು ಸಹಾಯಕ್ಕೆ ಕರೆದರೆ,  [www.mahanayaka.in]ಆತನ ಜೊತೆಗೆ ಎರಡು ಮೈಲು ದೂರ ನೀನು ಹೋಗು. ನಿನ್ನ ಬಳಿ ಸಾಲ ಕೇಳಿ ಬರುವವನಿಗೆ ಮುಖ ತಿರುವಿ ಕುಳಿತುಕೊಳ್ಳಬೇಡ ಎನ್ನುತ್ತಾರೆ.

ಸೌಹಾರ್ದದಿಂದ ಬದುಕುವ ಬಗ್ಗೆ ಏಸು ಕ್ರಿಸ್ತರು ಈ ರೀತಿಯಾಗಿ ಬೋಧಿಸುತ್ತಾರೆ, ಎಲ್ಲರೂ ನಿನ್ನವರನ್ನು ಪ್ರೀತಿಸು, ದುಷ್ಟರನ್ನು ಸಂಹರಿಸು ಎಂದು ಬೋಧಿಸಿದರೆ, ಏಸು ಕ್ರಿಸ್ತರು, ನಿನ್ನ ನೆರೆಹೊರೆಯವರನ್ನು ಪ್ರೀತಿಸು, ನಿನ್ನ ವೈರಿಗಳನ್ನೂ ಪ್ರೀತಿಸು. ನಿಮ್ಮನ್ನು ಯಾರು ಹಿಂಸೆಪಡಿಸುತ್ತಾರೋ ಅವರಿಗಾಗಿ ಪ್ರಾರ್ಥಿಸಿ,  ಹೀಗೆ ಮಾಡಿದರೆ ನೀವು ಪರಲೋಕದಲ್ಲಿ  ನಿಮ್ಮ ತಂದೆಗೆ ಮಕ್ಕಳಾಗುವಿರಿ.  ಸೂರ್ಯನು ಒಳ್ಳೆಯವರಿಗೂ , ಕೆಟ್ಟವರಿಗೂ ಬೆಳಕು ನೀಡುತ್ತಾನೆ, ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಹೇಗೆ ಮಳೆ ಸುರಿಯುತ್ತದೆಯೋ ಹಾಗೆಯೇ ಆತನು(ಪರಲೋಕದ ತಂದೆ) ಎಲ್ಲರ ಮೇಲೆಯೂ ಕರುಣೆ ತೋರಿಸುತ್ತಾನೆ. ಅಂದರೆ ಭೂಮಿಯ ಮೇಲೆ ಕೇವಲ ಒಳ್ಳೆಯವರಿಗೆ ಮಾತ್ರವೇ ಸೂರ್ಯನ ಬೆಳಕು ಬೀಳುವುದಿಲ್ಲ, [www.mahanayaka.in] ಒಳ್ಳೆಯವರಿಗೆ ಮಾತ್ರವೇ ಮಳೆ ಸುರಿಯುವುದಿಲ್ಲ, ಎಲ್ಲರಿಗೂ  ಸೂರ್ಯನ ಬೆಳಕು, ಮಳೆ ಬೀಳುತ್ತದೆ. ಹಾಗಾದರೆ ನನಗೆ ಒಳ್ಳೆಯದು ಮಾಡುವವನನ್ನು ಮಾತ್ರವೇ ನಾನು ಪ್ರೀತಿಸುತ್ತೇನೆ ಎನ್ನುವುದು ಎಷ್ಟು ಸರಿ? ಅಥವಾ ನನಗೆ ಒಳ್ಳೆಯದು ಮಾಡಿದವರನ್ನು ಮಾತ್ರವೇ ನಾನು ಪ್ರೀತಿಸಿದರೆ ಅದರ ಫಲ ಏನು ಎಂದು ಏಸು ಪ್ರಶ್ನಿಸುತ್ತಾರೆ. ಪರಲೋಕದಲ್ಲಿರುವ ನಿಮ್ಮ ತಂದೆ ಯಾರಿಗೂ ಬೇಧ ಭಾವ ಮಾಡುವುದಿಲ್ಲ. ಹಾಗಾಗಿ ಅವನಂತೆಯೇ ನೀವು ಕೂಡ ಯಾದಿಗೂ ಬೇಧ ಭಾವ ಮಾಡಬಾರದು ಎಂದು ಏಸು ಬೋಧಿಸುತ್ತಾರೆ.

ಇನ್ನೂ ಈಗಿನ ಕಾಲದಲ್ಲಿ ಬಹಳಷ್ಟು ನಾವು ನೋಡುತ್ತಿದ್ದೇವೆ. ಯಾರಿಗೋ ಸಹಾಯ ಮಾಡಿ, ಅದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಸಹಾಯ ಪಡೆದವರಿಗೆ ಮುಜುಗರ ಉಂಟು ಮಾಡುವಂತಹ ಘಟನೆ ನೋಡುತ್ತಿದ್ದೇವೆ.  ಸಹಾಯ ಪಡೆಯಲು ಭಯಪಡುವಂತಹ ಸನ್ನಿವೇಶ ಇದರಿಂದ ಸೃಷ್ಟಿಯಾಗಿದೆ. ಇಂತಹವರಿಗೆ ಏಸು ಕ್ರಿಸ್ತರು ಏನು ಹೇಳುತ್ತಾರೆ ಎಂದರೆ, ಜನ ನೋಡಲಿ ಎಂದು ಧರ್ಮ ಕಾರ್ಯಗಳನ್ನು ಮಾಡಬೇಡಿ. ಈ ರೀತಿಯಾಗಿ ಮಾಡಿದರೆ ಅದರ ಫಲ ನಿಮಗೆ ದೊರೆಯುವುದಿಲ್ಲ. [www.mahanayaka.in]  ಧರ್ಮ ನೀಡುವಾಗ ನಿನ್ನ ಎಡಗೈಯಿಂದ ಮಾಡಿದ ದಾನ ನಿನ್ನ ಬಲಗೈಗೆ ಗೊತ್ತಾಗದಷ್ಟು ಸೂಕ್ಷ್ಮವಾಗಿರಲಿ.  ನಿನ್ನ ಅಂತರಂಗದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಿನ್ನ ತಂದೆ ನೋಡುತ್ತಿದ್ದಾನೆ. ಅದೇ ಸತ್ಯ. ನಿನ್ನ ಅಂತರಂಗ ಶುದ್ಧವಾಗಿದ್ದರೆ, ಆತ ನಿನಗೆ ಫಲ ನೀಡುತ್ತಾನೆ ಎಂದು ಹೇಳುತ್ತಾರೆ.

ಇನ್ನೂಇನ್ನೊಬ್ಬರನ್ನು ಮೆಚ್ಚಿಸಲು ಪ್ರಾರ್ಥನೆ ಮಾಡುವವರ ಬಗ್ಗೆ ಏಸು ಕ್ರಿಸ್ತರು ಹೀಗೆ ಹೇಳುತ್ತಾರೆ,  ನೀನು ಪ್ರಾರ್ಥನೆ ಮಾಡುವಾಗ ಇನ್ನೊಬ್ಬರು [www.mahanayaka.in] ನೋಡಲಿ ಎಂದು ಪ್ರಾರ್ಥನೆ ಮಾಡಬೇಡ. ನಿನ್ನ ಏಕಾಂತದಲ್ಲಿ ನೀನು ಪ್ರಾರ್ಥನೆ ಮಾಡು. ಪ್ರಾರ್ಥನೆ ಮಾಡುವಾಗ ಅಜ್ಞಾನಿಯಂತೆ ಸುಮ್ಮನೆ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುತ್ತಾ ಇರಬೇಡ. ನಿನ್ನ ಅಂತರಂಗವನ್ನು ವಿಮರ್ಶಿಸು ಎನ್ನುತ್ತಾರೆ.

ಇನ್ನು ಕ್ಷಮೆಯ ಬಗ್ಗೆ ಏಸು ಕ್ರಿಸ್ತರು ಹೀಗೆ ಹೇಳುತ್ತಾರೆ, ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ,  ಪರಲೋಕದಲ್ಲಿರುವ ನಿಮ್ಮ ತಂದೆ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. [www.mahanayaka.in]  ನೀವು ಜನರ ತಪ್ಪುಗಳನ್ನು ಕ್ಷಮಿಸದೇ ಹೋದರೆ,  ನಿಮ್ಮ ತಪ್ಪುಗಳನ್ನು ನಿಮ್ಮ ತಂದೆಯೂ ಕ್ಷಮಿಸುವುದಿಲ್ಲ ಎಂದು ಹೇಳುತ್ತಾರೆ.

ಇನ್ನೂ ಕೆಲವರು ಭೂಲೋಕದಲ್ಲಿ ಸಂಪತ್ತು ಕೂಡಿಟ್ಟು ಗಂಟು ಮಾಡಿ ಇಡುತ್ತಾರೆ, ಅಂತವರಿಗೆ ಏಸು ಕ್ರಿಸ್ತರು ಹೀಗೆ ಹೇಳುತ್ತಾರೆ, ನೀವು ಭೂಲೋಕದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಬೇಡಿ, [www.mahanayaka.in]  ಅದು ಒಂದೋ ಗೆದ್ದಲು ಹತ್ತಿ ಹಾಳಾಗುವುದು. ಇಲ್ಲವಾದರೆ, ಕಳ್ಳರು ಕದಿಯ ಬಹುದು. ನೀವು ಸಂಪತ್ತನ್ನು ಕೂಡಿಡದೇ ಪರೋಪಕಾರಿಯಾಗಿ ಬದುಕಿ, ಇಲ್ಲದವರಿಗೆ ನೀಡಿ ಆಗ ಪರಲೋಕದಲ್ಲಿ ನಿಮ್ಮ ಗಂಟು(ಸಂಪತ್ತು) ಭದ್ರವಾಗುತ್ತದೆ. ಅದಕ್ಕೆ ಗೆದ್ದಲು ಹಿಡಿಯುವುದಿಲ್ಲ, ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ.

ಇನ್ನೂ ಕೆಲವರಿಗೆ ಇನ್ನೊಬ್ಬರ ಜೀವನದ ಬಗ್ಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿಕೊಳ್ಳುವ ಅಭ್ಯಾಸ ಹೆಚ್ಚಿರುತ್ತದೆ. ಅಂತವರಿಗೆ ಏಸು ಕ್ರಿಸ್ತರು ಹೀಗೆ ಹೇಳುತ್ತಾರೆ,  ಇನ್ನೊಬ್ಬರಿಗೆ ನೀವು ತೀರ್ಪು ನೀಡಬೇಡಿ, ಒಂದು ದಿನ ನೀವು ಕೂಡ ಅದೇ [www.mahanayaka.in] ತೀರ್ಪಿಗೆ ಗುರಿಯಾಗುತ್ತೀರಿ. ನಿಮ್ಮಲ್ಲಿಯೇ  ಇರುವ ಸಾಕಷ್ಟು ದೋಷಗಳನ್ನು ಸರಿಪಡಿಸಿಕೊಳ್ಳದೇ ಪಕ್ಕದಲ್ಲಿರುವವನ ದೋಷವನ್ನು ನೀವೇಕೆ ಮಾತನಾಡಿಕೊಳ್ಳುವಿರಿ? ನಿನ್ನ ಕಣ್ಣಿನೊಳಗೆ ಕಟ್ಟಿಗೆಯ ಕಡ್ಡಿ ಬಿದ್ದಿರುವಾಗ ನಿನ್ನ ಸಹೋದರನ ಕಣ್ಣಿನಲ್ಲಿ ರವೆ ಬಿದ್ದಿದೆ. ಅದನ್ನು ನಾನು ತೆಗೆಯುತ್ತೇನೆ ಎಂದು ನೀನು ಹೇಳಿದರೆ ಹೇಗಿರುತ್ತದೆ. ಎಂದಿಗೂ ಯಾರಿಗೂ ತೀರ್ಪು ನೀಡಬೇಡ ಒಂದು ದಿನ ನೀನೂ ತೀರ್ಪಿಗೆ ಗುರಿಯಾಗುತ್ತಿ ಎಂದು ಏಸು ಕ್ರಿಸ್ತರು ಹೇಳುತ್ತಾರೆ.

ಭಗವಾನ್ ಗೌತಮ ಬುದ್ಧರು ಹಾಗೂ ಏಸು ಕ್ರಿಸ್ತರ ಬಹುತೇಕ ವಿಚಾರಗಳು ಸಾಮ್ಯತೆಯಿಂದ ಕೂಡಿದೆ.  ಬುದ್ಧರು ಹೇಳಿದ ಬಹಳಷ್ಟು ವಿಚಾರಗಳನ್ನೇ ಏಸು ಕ್ರಿಸ್ತರು ಕೂಡ ಹೇಳುತ್ತಾರೆ. [www.mahanayaka.in]  ಆದರೆ ಬುದ್ಧರು ದೇವರಿಲ್ಲ, ನೀವು ಬೇಡಿದ್ದನ್ನು ನೀಡುವ ಅದೃಶ್ಯ ಶಕ್ತಿ ಬೇರಾವುದೂ ಇಲ್ಲ, ಪರಲೋಕ ಇಲ್ಲ ಎಂದು ಬೋಧಿಸಿದರೆ, ಏಸು ಕ್ರಿಸ್ತರು ಪರಲೋಕದಲ್ಲಿರುವ ತಂದೆಯೂ ನಿಮ್ಮನ್ನು ನೋಡುತ್ತಿದ್ದಾರೆ, ನಿಮ್ಮ ಅಂತರಂಗವನ್ನು ಶುದ್ಧಿಯಾಗಿಟ್ಟುಕೊಳ್ಳಿ ಎಂದು ಹೇಳುತ್ತಾರೆ.  ಬುದ್ಧರು ವಾಸ್ತವಿಕತೆಯ ಮೇಲೆ ಧರ್ಮವನ್ನು ಬೋಧಿಸಿದರೆ, ಏಸು ಕ್ರಿಸ್ತರು, ನಂಬಿಕೆಗಳ ಮೇಲೆ ಧರ್ಮವನ್ನು ಬೋಧಿಸುತ್ತಾರೆ.

ಇತ್ತೀಚಿನ ಸುದ್ದಿ