ಎತ್ತಿನಗಾಡಿಯಿಂದ ಕೆಳಕ್ಕೆ ಉರುಳಿದ ಕಾಂಗ್ರೆಸ್ ನಾಯಕರು - Mahanayaka

ಎತ್ತಿನಗಾಡಿಯಿಂದ ಕೆಳಕ್ಕೆ ಉರುಳಿದ ಕಾಂಗ್ರೆಸ್ ನಾಯಕರು

congress
13/09/2021

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ಖಂಡಿಸಿ, ಇಂದು ಕಾಂಗ್ರೆಸ್ ವಿಭಿನ್ನವಾಗಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಎತ್ತಿನ ಬಂಡಿ ಏರುವ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದು.

ವಿಧಾನಸೌಧ ಆವರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಎತ್ತಿನ ಬಂಡಿಯಲ್ಲಿಯೇ ತೆರಳಿದ್ದು, ಈ ಬಂಡಿಯಲ್ಲಿ ಕಾಂಗ್ರೆಸ್ ನಾಯಕ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಜಿ.ಸಂಗಮೇಶ್, ಅಶೋಕ್ ಪಠಾಣ್ ಸೇರಿದಂತೆ ಹಲವು ನಾಯಕರು ಇದ್ದರು.

ಕಾರ್ಯಕರ್ತ ಘೋಷಣೆ ಮೊದಲಾದವುಗಳನ್ನು ಕಂಡ ಎತ್ತು ಭೀತಿಗೊಂಡಿದ್ದು, ಏಕಾಏಕಿ ನಿಂತಲ್ಲಿಂದ ಎಗರಿದೆ. ಈ ವೇಳೆ  ಎತ್ತಿನ ಬಂಡಿಯ ಹಿಂದೆ ನಿಂತಿದ್ದ ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಎತ್ತಿನ ಬಂಡಿಯಿಂದ ಕೆಳಗೆ ಬಿದ್ದಿದ್ದಾರೆ.  ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನಷ್ಟು ಸುದ್ದಿಗಳು…

ಪ್ರಾಣ ಸ್ನೇಹಿತರು ಜೊತೆಯಾಗಿ ಪ್ರಾಣ ಬಿಟ್ಟರು: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು ಪ್ರಾಣಕ್ಕೆ ಕುತ್ತು ತಂದಿತು!

ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ

ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿ ಬಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್

ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ನಾಲ್ಕು ವರ್ಷ ವಯಸ್ಸಿನ ಬಾಲಕನ ದಾರುಣ ಸಾವು!

ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಬಳೆ ಇಟ್ಟು, ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಬಿರಿಯಾನಿ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿ ಸಾವು: 15 ದಿನಗಳ ಹಳೆಯ ಕೋಳಿ ಮಾಂಸದಲ್ಲಿ ಬಿರಿಯಾನಿ ತಯಾರಿಕೆ!

ಅರ್ಜುನ್ ಸರ್ಜಾ ವಿರುದ್ಧದ ‘ಮಿ ಟೂ’  ಪ್ರಕರಣಕ್ಕೆ ಮರುಜೀವ:  ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ಲೈಂಗಿಕ ದೌರ್ಜನ್ಯ?

ಇತ್ತೀಚಿನ ಸುದ್ದಿ