ನೀರಿನಲ್ಲಿ ಯೋಗ ಮಾಡುತ್ತಿದ್ದ ವೇಳೆ ಯೋಗಗುರು ಸಾವು! - Mahanayaka
4:41 AM Thursday 20 - February 2025

ನೀರಿನಲ್ಲಿ ಯೋಗ ಮಾಡುತ್ತಿದ್ದ ವೇಳೆ ಯೋಗಗುರು ಸಾವು!

yoga guru nagaraj
16/02/2025

ಚಾಮರಾಜನಗರ: ಕೊಳ್ಳೇಗಾಲದ ದಾಸನಪುರ ಬಳಿಯ ಕಾವೇರಿ ನದಿ(Cauvery River)ಯಲ್ಲಿ ಯೋಗ ಮಾಡುತ್ತಿದ್ದ ವೇಳೆ ಯೋಗಪಟು ಮೃತಪಟ್ಟಿರುವ ಘಟನೆ  ನಡೆದಿದೆ.

ಕೊಳ್ಳೇಗಾಲದ ಯೋಗಪಟು ನಾಗರಾಜ್ (78) ಮೃತಪಟ್ಟವರಾಗಿದ್ದಾರೆ. ತೀರ್ಥ ಸ್ನಾನ ಮಾಡಲೆಂದು ನಾಗರಾಜ್ ಕಾವೇರಿ ನದಿಗೆ ಇಳಿದಿದ್ದರು. ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಈ ವೇಳೆ ಅವರು ಮೃತಪಟ್ಟಿದ್ದಾರೆ  ಎಂದು ತಿಳಿದು ಬಂದಿದೆ.

ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದ ಲಕ್ಷ್ಮೀ ನಾರಾಯಣ ದೇವಾಲಯದ ಬೀದಿಯಲ್ಲಿ ವಾಸವಿದ್ದರು. ಕಳೆದ 30 ವರ್ಷಗಳಿಂದ ಯೋಗಾಭ್ಯಾಸ(Yoga) ಮಾಡುತ್ತಿದ್ದರು. ಪಟ್ಟಣದಲ್ಲಿ ಇವರು ಯೋಗಗುರು ಎಂದೇ ಪ್ರಖ್ಯಾತರಾಗಿದ್ದರು.

ಶನಿವಾರ ತಮ್ಮ ಸ್ನೇಹಿತರ ಜೊತೆಗೆ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಯೋಗ ಮಾಡುತ್ತಿದ್ದ ನಾಗರಾಜ್ ಹಿಮ್ಮುಖವಾಗಿ ತೇಲುತ್ತಾ, ಯೋಗ ನಿದ್ರೆಯಲ್ಲಿದ್ದರು.  30 ನಿಮಿಷ ಕಳೆದರೂ ಅವರಲ್ಲಿ ಚಲನೆ ಕಂಡುಬಾರದ ಹಿನ್ನೆಲೆ ಸ್ನೇಹಿತರ ಸಮೀಪಕ್ಕೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ