ಯೋಗಿ ಆದಿತ್ಯನಾಥ್ ಗೆ ಕೊರೊನಾ ಪಾಸಿಟಿವ್ | ಆಸ್ಪತ್ರೆಗೆ ದಾಖಲು

yogi adithyanath
14/04/2021

ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, ಅವರು ವೈದ್ಯರ ಸಲಹೆ ಪಡೆದು ಐಸೋಲೇಷನ್ ನಲ್ಲಿದ್ದಾರೆ ಎಂದು ಸ್ವತಃ ಟ್ವೀಟ್ ಮಾಡಿದ್ದಾರೆ.

ಸೋಂಕುಗಳ ಲಕ್ಷಣ ಕಂಡು ಬಂದ ಕಾರಣ ಯೋಗಿ ಆದಿತ್ಯನಾಥ್ ಅವರು ವೈದ್ಯರ ಸಲಹೆ ಪಡೆದುಕೊಂಡು, ಕೊವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಪರೀಕ್ಷೆಯ ವೇಳೆ ಕೊರೊನಾ ಇರುವುದಾಗಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಸಾರ್ವಜನಿಕರು ಕೂಡ ಯಾವುದೇ, ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದರೆ, ವೈದ್ಯರ ಸಲಹೆ ಪಡೆದು, ಕೊವಿಡ್ ಪರೀಕ್ಷೆ ಮಾಡಿಸಿಕೊಂಡು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಿರಿ. ಗೋಮೂತ್ರದಿಂದ ಕೊರೊನಾ ವಾಸಿಯಾಗುತ್ತದೆ ಎಂದು ಹೇಳಿಕೆ ನೀಡಿರುವ ನಾಯಕರೆಲ್ಲರೂ ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆಗಳಲ್ಲಿಯೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಮೂತ್ರದಿಂದ ಯಾವ ಕಾಯಿಲೆಯೂ ಗುಣವಾಗುವುದಿಲ್ಲ ಎನ್ನುವುದು ನಿಜವಾದ ವಿಚಾರ ಹಾಗಾಗಿ ಸಾರ್ವಜನಿಕರು ಕೊವಿಡ್ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಉತ್ತಮ ಎನ್ನುವ ಚರ್ಚೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version