ಕ್ರೈಸ್ತ ಸನ್ಯಾಸಿನಿಯರಿಗೆ ಅವಮಾನ ಪ್ರಕರಣಕ್ಕೆ ಹೊಸ ತಿರುವು | ಕೇರಳ ಬಿಜೆಪಿ ಮಾಡಿದ್ದೇನು ಗೊತ್ತಾ? - Mahanayaka
4:20 PM Wednesday 5 - February 2025

ಕ್ರೈಸ್ತ ಸನ್ಯಾಸಿನಿಯರಿಗೆ ಅವಮಾನ ಪ್ರಕರಣಕ್ಕೆ ಹೊಸ ತಿರುವು | ಕೇರಳ ಬಿಜೆಪಿ ಮಾಡಿದ್ದೇನು ಗೊತ್ತಾ?

christian sisters in up
23/03/2021

ತಿರುವನಂತಪುರಂ: ದೆಹಲಿಯಿಂದ ಒಡಿಶಾಕ್ಕೆ  ರೈಲು ಪ್ರಯಾಣದ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ ನಡೆಸಿದ ಪ್ರಕರಣ ಇದೀಗ ಕೇರಳದಲ್ಲಿ ಕಿಡಿ ಹತ್ತಿಸಿದ್ದು, ಈ ಪ್ರಕರಣ ಕೇರಳ ಬಿಜೆಪಿಯ ನಿದ್ದೆಗೆಡಿಸಿದೆ.

ಇದೀಗ ಕೇರಳ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ಈ ಬಗ್ಗೆ  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದು, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ.

ಮಾರ್ಚ್ 19ರಂದು ದೆಹಲಿಯಿಂದ ಒಡಿಶಾಕ್ಕೆ ತೆರಳಿದ್ದ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ, ಮತಾಂತರ ಮಾಡಲು ಬಂದಿದ್ದಾರೆ ಎಂದು ದೂರು ದಾಖಲಿಸಿದ್ದರು.

ಘಟನೆಯ ಸಂದರ್ಭ ಇಲ್ಲಿನ ಪೊಲೀಸರು ಕೂಡ ಕ್ರಿಮಿನಲ್ ಗಳಂತೆ ನಡೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಕುರಿಯನ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುರಿಯನ್ ಒತ್ತಾಯಿಸಿದ್ದಾರೆ.

ಮಾರ್ಚ್ 19ರಂದು ನಡೆದಿದ್ದ ಘಟನೆಯ ವರದಿಯು ಮಹಾನಾಯಕ ಮಾಧ್ಯಮಕ್ಕೆ ಬಲ್ಲ ಮೂಲಗಳಿಂದ ತಿಳಿದು ಬಂದಿತ್ತು. ಕರ್ನಾಟಕದಲ್ಲಿ ಈ ವರದಿಯನ್ನು ಮಾಡಿರುವ ಏಕೈಕ ಮಾಧ್ಯಮ ಮಹಾನಾಯಕ ಅಂತರ್ಜಾಲ ಮಾಧ್ಯಮವಾಗಿದೆ.

ಇವುಗಳನ್ನೂ ಓದಿ:

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ | ಎಣ್ಣೆ ಹೊಡೆದು ಸತ್ತವರಿಗೆ ವಿಮಾ ಹಣ ಇಲ್ಲ!

ರೈಲಿನಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ

ಇತ್ತೀಚಿನ ಸುದ್ದಿ