ಪ್ರತಿಯೊಂದು ಪುಟದಲ್ಲೂ ಭಗವಾನ್ ಶ್ರೀರಾಮನಿದ್ದಾನೆ: ಬಜೆಟನ್ನು ಶ್ರೀರಾಮನಿಗೆ ಅರ್ಪಿಸಲಾಗಿದೆ ಎಂದ ಯೋಗಿ

05/02/2024
ಉತ್ತರಪ್ರದೇಶ ರಾಜ್ಯದ 2024- 25 ರ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಿದೆ. ವಿಶೇಷ ಏನಂದ್ರೆ ಈ ಬಜೆಟ್ ಅನ್ನು ಭಗವಾನ್ ಶ್ರೀರಾಮನಿಗೆ ಅರ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ನಲ್ಲಿ ಮಂಡನೆಯಾದ ಇಂದಿನ ಬಜೆಟ್ ಅನ್ನು ಶ್ರೀರಾಮನಿಗೆ ಸಮರ್ಪಿಸಲಾಗಿದೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಬಜೆಟ್‌ನ ಆರಂಭ, ಮಧ್ಯ ಮತ್ತು ಕೊನೆಯಲ್ಲಿ ಪ್ರತಿಯೊಂದು ಪುಟದಲ್ಲೂ ಭಗವಾನ್ ಶ್ರೀರಾಮನಿದ್ದಾನೆ ಎಂದರು.
ಬಜೆಟ್ ನ ಆಲೋಚನೆ ಮತ್ತು ನಿರ್ಣಯಗಳಲ್ಲಿ ಶ್ರೀರಾಮನು ಇದ್ದಾನೆ. ಯಾಕೆಂದರೆ ಶ್ರೀರಾಮನು ಲೋಕಮಂಗಲಕ್ಕೆ ಸಮಾನಾರ್ಥಕನಾಗಿದ್ದಾನೆ. ಈ ಬಜೆಟ್ ರಾಜ್ಯದ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಗಾಗಿ ಉತ್ತರ ಪ್ರದೇಶದ ಆರ್ಥಿಕ ದಾಖಲೆಯಾಗಿದೆ. ಇದು ಜನರ ಕಲ್ಯಾಣಕ್ಕೆ ಸಮರ್ಪಿಸಲಾಗಿದೆ ಎಂದರು.