ಯೋಗಿಯ ರಾಜ್ಯದಲ್ಲಿ ಮತ್ತೊಂದು ರೇಪ್:  ಚೂರಿಯಿಂದ ಚುಚ್ಚಿ ಬಾಲಕಿಯ ಸಾಮೂಹಿಕ ಅತ್ಯಾಚಾರ - Mahanayaka
5:30 AM Wednesday 5 - February 2025

ಯೋಗಿಯ ರಾಜ್ಯದಲ್ಲಿ ಮತ್ತೊಂದು ರೇಪ್:  ಚೂರಿಯಿಂದ ಚುಚ್ಚಿ ಬಾಲಕಿಯ ಸಾಮೂಹಿಕ ಅತ್ಯಾಚಾರ

24/02/2021

ಗೊಂಡಾ:  ಉತ್ತರಪ್ರದೇಶದಿಂದ ದಕ್ಷಿಣ ಭಾರತಕ್ಕೆ ಚುನಾವಣೆ ಸಂದರ್ಭ ಬಂದು ಭಾಷಣ ಮಾಡಿ ಹೋಗುವ ಯೋಗಿ ಆದಿತ್ಯನಾಥ್ ಅವರ ಆಡಳಿತದ ಉತ್ತರ ಪ್ರದೇಶ ಯಾವ ಸ್ಥಿತಿಯಲ್ಲಿದೆ ನೋಡಿ… ಹೆಣ್ಣು ಮಕ್ಕಳು ರಾತ್ರಿ ತಿರುಗಾಡುವುದು ಬಿಡಿ, ಬೆಳಗ್ಗಿನ ಸಮಯದಲ್ಲಿಯೂ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

15 ವರ್ಷದ  10ನೇ ತರಗತಿಯ  ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಕೃಷಿ ಜಮೀನೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದು, ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದಾಗ ಚೂರಿಯಿಂದ ಚುಚ್ಚಿ ಆಕೆಯನ್ನುಗಾಯಗೊಳಿಸಿ ಅತ್ಯಾಚಾರ ಎಸಗಿದ್ದಾರೆ.

ಮೂವರು ಆರೋಪಿಗಳ ಈ ಕೃತ್ಯ ಎಸಗಿದ್ದಾರೆ. ಬಾಲಕಿ ಆರೋಪಿಗಳ ವಿರುದ್ಧ ತಿರುಗಿ ಬಿದ್ದಾಗ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಖಂಡೇರು ಮತ್ತು ಇತರ ಮೂವರು ಅಪರಿಚಿತರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.  ಬಾಲಕಿಯ ಮೇಲೆ ಇಷ್ಟೊಂದು ದೊಡ್ಡ ದಾಳಿ ನಡೆದಿದ್ದರೂ ಪೊಲೀಸರು ವೈದ್ಯಕೀಯ ಪರೀಕ್ಷೆ ಬರಲಿ ಆ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿ