ತೋಟದಿಂದ ಏಣಿ ತರುವ ವೇಳೆ ವಿದ್ಯುತ್ ಶಾಕ್: ಯುವಕ ಸಾವು

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ತೊಪ್ಪುರು ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ತೋಟದಲ್ಲಿ ಅಲ್ಯೂಮಿನಿಯಂ ಏಣಿ ಕರೆತರುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ಯುವಕ ಮೃತಪಟ್ಟಿದ್ದಾನೆ.
ಸಂಪತ್ (28) ಮೃತಪಟ್ಟ ಯುವಕನಾಗಿದ್ದಾನೆ. ತೋಟದ ಕೆಲಸದ ವೇಳೆ ಅಲ್ಯೂಮಿನಿಯಂ ಏಣಿಯನ್ನು ತೆಗೆದು ತರುತ್ತಿದ್ದ ಸಂಪತ್, ಆ ಏಣಿ ಅಚಾನಕ್ ವಿದ್ಯುತ್ ತಂತಿಗೆ ತಗುಲಿ ತೀವ್ರ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೂರು ವರ್ಷಗಳ ಹಿಂದಷ್ಟೆ ಮದುವೆಯಾಗಿದ್ದ ಸಂಪತ್ ಅವರಿಗೆ ಚಿಕ್ಕ ಮಗು ಕೂಡ ಇದೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದುರಂತ ಘಟನೆ ತೊಪ್ಪುರು ಗ್ರಾಮದಲ್ಲಿ ಆಘಾತ ಮೂಡಿಸಿದ್ದು, ಮೃತನ ಕುಟುಂಬ ಆಕ್ರಂದನ ಮುಗಿಲು ಮುಟ್ಟಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4