ಕಾಮಾಲೆ ರೋಗ ಉಲ್ಬಣಿಸಿ ನಾವೂರಿನ ಯುವಕ ಸಾವು
ಬೆಳ್ತಂಗಡಿ; ನಾವೂರು ಗ್ರಾಮದ ನಿರ್ದಿಂ ನಿವಾಸಿ ಅಬ್ದುಲ್ ಮುತ್ತಲಿಬ್ ಮತ್ತು ಝುಬೈದಾ ದಂಪತಿ ಪುತ್ರ ಮುಹಮ್ಮದ್ ಹನೀಫ್ (22) ಎಂಬವರು ಫೆ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿಯ ಚಿನ್ನದ ಮಳಿಗೆಯಲ್ಲಿ ಮಾರ್ಕೆಟಿಂಗ್ ಫೀಲ್ಡ್ ವಿಭಾಗದಲ್ಲಿ ಕೆಲಸದಲ್ಲಿದ್ದ ಅವರಿಗೆ ಕೆಲದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದರು.
ಹೀಗಿರುವಂತೆಯೇ ಅವರಿಗೆ ರೋಗ ಉಲ್ಬಣಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾದವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ.
ಮುಹಮ್ಮದ್ ಹನೀಫ್ ಅವರು ಎಸ್ಸೆಸ್ಸೆಫ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದರು. ಮೃತರು ತಂದೆ, ತಾಯಿ ಅಲ್ಲದೆ ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw