ಕೈ ಕಾಲು ಮತ್ತು ಎದೆಗೆ ಗುಂಡಿಟ್ಟು ಯುವಕನ ಕೊಲೆ: ಇಸ್ರೇಲ್ ನ ಮಹಾ ಕ್ರೌರ್ಯ ಬಯಲು - Mahanayaka
3:05 PM Monday 16 - September 2024

ಕೈ ಕಾಲು ಮತ್ತು ಎದೆಗೆ ಗುಂಡಿಟ್ಟು ಯುವಕನ ಕೊಲೆ: ಇಸ್ರೇಲ್ ನ ಮಹಾ ಕ್ರೌರ್ಯ ಬಯಲು

07/09/2024

ಕೈ ಕಾಲು ಮತ್ತು ಎದೆಗೆ ಗುಂಡಿಟ್ಟು ಸಾಯಿಸಿದ ಬಳಿಕ 17 ವರ್ಷದ ಯುವಕನ ಮೃತದೇಹದ ಮೇಲೆ ಇಸ್ರೇಲ್ ಸೇನೆ ಕ್ರೌರ್ಯ ಎಸಗಿರುವುದು ಬಹಿರಂಗಗೊಂಡಿದೆ. ಬುಲ್ಡೋಜರ್ ಅನ್ನು ಮೃತ ದೇಹದ ಮೇಲೆ ಹತ್ತಿಸಿ ಬುಲ್ಡೋಜರ್ ನ ಕಬ್ಬಿಣದ ಕೈಗಳಿಂದ ಯುವಕನ ಕಾಲುಗಳನ್ನು ಕತ್ತರಿಸಿದ್ದಲ್ಲದೆ ಆತನ ಹೊಟ್ಟೆಯನ್ನು ಸೀಳಿ ಅಂಗಾಂಗಗಳನ್ನು ಕಿತ್ತೆಸೆದ ಘಟನೆಯ ವಿಡಿಯೋ ವೈರಲ್ ಆಗಿದೆ.

ಪಶ್ಚಿಮ ದಂಡೆಯ ತೂಬಾಸ್ ನ ಅಲ್ ಫರಾ ನಿರಾಶ್ರಿತ ಶಿಬಿರದಲ್ಲಿ ಈ ಕ್ರೌರ್ಯ ನಡೆದಿದೆ. ಫೆಲೆ ಸ್ತೀನಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಈ ಭಯಾನಕ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಈ ಯುವಕನ ಹೆಸರು ಮಜೀದ್ ಫಿದಾ ಎಂದು ಗುರುತಿಸಲಾಗಿದೆ.

ಮಧ್ಯರಾತ್ರಿ 12:45 ಕ್ಕೆ ನಿರಾಶ್ರಿತ ಕ್ಯಾಂಪಿಗೆ ಬುಲ್ಟೋಝರ್ ಮತ್ತು ಡ್ರೋನ್ ನೊಂದಿಗೆ ನುಗ್ಗಿದ ಇಸ್ರೇಲಿ ಸೇನೆಯು ಈ ಯುವಕನನ್ನು ಗುಂಡಿಟ್ಟು ಸಾಯಿಸಿದೆ. ಮೊದಲು ಆತನ ಕಾಲಿಗೆ ಇಸ್ರೇಲ್ ಯೋಧರು ಗುಂಡಿಕ್ಕಿದರು. ಬಳಿಕ ಆತನ ಶರ್ಟ್ ಕಳಚಲು ಹೇಳಿದರು. ಆತ ಕಳಚಿದ. ಬಳಿಕ ಪ್ಯಾಂಟ್ ಕಳಚಲು ಹೇಳಿದರು. ಅದು ಆತನಿಗೆ ಸಾಧ್ಯವಾಗಲಿಲ್ಲ.


Provided by

 

ಬಳಿಕ ಆತನಿಗೆ ಗುಂಡಿಕ್ಕಿದರು. ಆತ ರಕ್ತದ ಮಡುವಿನಲ್ಲಿ ಬಿದ್ದ. ಆದರೆ ಆತನಿಗೆ ಚಿಕಿತ್ಸೆ ನೀಡುವುದಕ್ಕೋ ಆಸ್ಪತ್ರೆಗೆ ಸಾಗಿಸುವುದಕ್ಕೋ ಯಾರಿಗೂ ಈ ಯೋಧರು ಅನುಮತಿಸಿಲ್ಲ ಎಂದು ಗೊತ್ತಾಗಿದೆ. ಆ ಬಳಿಕ ಮನುಷ್ಯರೇ ನಾಚುವಂತೆ ಕ್ರೌರ್ಯವನ್ನು ಆತನ ದೇಹದ ಮೇಲೆ ಈ ಯೋಧರು ಎಸಗಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ