ಕುಡಿಯಲು ತಾಯಿ ಹಣ ಕೊಡಲಿಲ್ಲ ಎಂದು ಹೈ ಟೆನ್ಷನ್ ವೈರ್ ಮೇಲೆ ಮಲಗಿದ ಯುವಕ!
ಅಮರಾವತಿ: ತಾಯಿ ಕುಡಿಯಲು ಹಣ ನೀಡಲಿಲ್ಲ ಎಂದು ಯುವಕನೊಬ್ಬ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಘಟನೆ ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಪಾಲಕೊಂಡ ಮಂಡಲ ಎಂ ಸಿಂಗಾಪುರದ ನಿವಾಸಿ ಯುವಕ ಯಜ್ಜಲ ವೆಂಕಣ್ಣ ಕುಡಿತಕ್ಕೆ ದಾಸನಾಗಿದ್ದು, ತಾಯಿಯ ಬಳಿ ಕುಡಿತಕ್ಕೆ ಹಣ ಕೇಳಿದ್ದಾನೆ ಆದ್ರೆ ಅವರು ಕೊಡುವುದಿಲ್ಲ ಎಂದಾಗ ವಿದ್ಯುತ್ ಕಂಬ ಏರುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ ನೋಡ ನೋಡುತ್ತಲೇ ವಿದ್ಯುತ್ ಕಂಬವನ್ನೇರಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಗ್ರಾಮದ ಟ್ರಾನ್ಸ್ ಫಾರ್ಮರ್ ಬಳಿ ಹೋಗಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ಸಾಹಸ ಮೆರೆದಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಕೊನೆಗೆ ಗ್ರಾಮಸ್ಥರು ಮದ್ಯ ಸೇವಿಸಲು ಹಣ ನೀಡುವುದಾಗಿ ಹೇಳಿ ಕೆಳಗಿಳಿಸಿದ್ದಾರೆ.
ತಾಯಿಗೆ ಪಿಂಚಣಿ ಬಂದ ಪಿಂಚಣಿ ಹಣವನ್ನೂ ಬಿಡದೇ ಪಾಪಿ ಪುತ್ರ ಮದ್ಯ ಸೇವನೆ ಮಾಡುತ್ತಿದ್ದ. ಹಣವಿಲ್ಲ ಎಂದಾಗ ಒಂದಲ್ಲ ಒಂದು ಅನಾಹುತಕ್ಕೆ ಕೈಹಾಕುತ್ತಿದ್ದಾನೆ. ಇಂಥ ಮಗ ಇದ್ದರೆಷ್ಟು ಹೋದರೆಷ್ಟು ಅಂತ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: