ಬೆಚ್ಚಿಬಿದ್ದ ಕೇರಳ: ಪ್ರೇಯಸಿ ಮತ್ತು ತನ್ನದೇ ಕುಟುಂಬದ 6 ಮಂದಿಯನ್ನು ಕೊಂದಿದ್ದೇನೆಂದು ಪೊಲೀಸರಿಗೆ ಶರಣಾದ ಯುವಕ!

ತಿರುವನಂತಪುರಂ: ಯುವಕನೊಬ್ಬ “ನನ್ನ ಪ್ರೇಯಸಿ ಸಹಿತ 6 ಮಂದಿಯನ್ನು ಕೊಂದಿರುವುದಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದ್ದು, ಇದರ ಬೆನ್ನಲ್ಲೇ ಭೀಕರ ಸಾಮೂಹಿಕ ಹತ್ಯೆಯೊಂದು ಬೆಳಕಿಗೆ ಬಂದಿದೆ.
ಅಫಾನ್(23) ಈ ದುಷ್ಕೃತ್ಯ ಎಸಗಿದ ಯುವಕನಾಗಿದ್ದಾನೆ. ಸೋಮವಾರ ಸಂಜೆ ಕೆಲವೇ ಗಂಟೆಗಳಲ್ಲಿ ವಿಭಿನ್ನ ಮೂರು ಸ್ಥಳಗಳಲ್ಲಿ ಈತ ತನ್ನ ಕುಟುಂಬಸ್ಥರನ್ನೇ ಹತ್ಯೆ ಮಾಡಿದ್ದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯ 13 ವರ್ಷದ ಸಹೋದರ ಅಹಸನ್, ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಅವನ ಗೆಳತಿ ಫರ್ಶಾನಾಳನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಇನ್ನೂ ಅಫಾನ್ ನ ತಾಯಿ ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಗೆ ಶರಣಾಗುವ ಮುನ್ನ ಅಫಾನ್ ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹೀಗಾಗಿ ಆತನನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ಯಾವ ಕಾರಣಕ್ಕಾಗಿ ತನ್ನ ಪ್ರೇಯಸಿ ಹಾಗೂ ಕುಟುಂಬಸ್ಥರನ್ನೇ ಹತ್ಯೆ ನಡೆಸಿದ್ದಾನೆ ಎನ್ನುವ ಬಗ್ಗೆ ಯಾವುದೇ ಮಾಹಿತಿಗಳ ತಿಳಿದು ಬಂದಿಲ್ಲ, ಈ ಭೀಕರ ಸಾಮೂಹಿಕ ಹತ್ಯೆಯ ಹಿಂದಿನ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7