ಯುವತಿ ಸುತ್ತಾಡಲು ಬರಲಿಲ್ಲ ಅಂತ ಹಾಸ್ಟೆಲ್ ಗೆ ಕಲ್ಲೆಸೆದ ಯುವಕ!: ಮುಂದೇನಾಯ್ತು ನೋಡಿ…
04/11/2023
ತಾನು ಪ್ರೀತಿಸುತ್ತಿದ್ದ ಯುವತಿ ತನ್ನೊಂದಿಗೆ ಸುತ್ತಾಡಲು ಬಾರದ ಸಿಟ್ಟಿನಿಂದ ಯುವಕನೊಬ್ಬ ಪಿಜಿ ಹಾಸ್ಟೆಲ್ ಕಟ್ಟಡಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ವಿವೇಕ್ (18) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಸಂತ ಆ್ಯಗ್ನೆಸ್ ಕಾಲೇಜು ಸಮೀಪ ಈ ಘಟನೆ ಸಂಭವಿಸಿದ್ದು, ಆಕ್ರೋಶಿತ ಸಾರ್ವಜನಿಕರು ಯುವಕನಿಗೆ ಹಲ್ಲೆಗೈದು ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ವಿವೇಕ್ ಎಂಬಾತ ನಗರದಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ. ಈತ ಪಿಜಿಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಯುವಕನು ಸುತ್ತಾಡಲು ಕರೆದಿದ್ದ. ಆದರೆ ಆಕೆ ಅದಕ್ಕೆ ಒಪ್ಪದ ಕಾರಣ ಸಿಟ್ಟಾದ ವಿವೇಕ್ ಆಕೆ ಕೆಲಸ ಮಾಡುತ್ತಿದ್ದ ಪಿಜಿ ಹಾಸ್ಟೆಲ್ ಕಟ್ಟಡದ ಗಾಜುಗಳಿಗೆ ಕಲ್ಲೆಸೆದ ಎಂದು ಆರೋಪಿಸಲಾಗಿದೆ.